Site icon PowerTV

ಅಭಿಮಾನಿ ಬೈಕ್ ಅನ್ನು ತಮ್ಮ ಟೀ ಶರ್ಟ್​ ನಿಂದ ಕ್ಲೀನ್ ಮಾಡಿದ ದೋನಿ!: ವೀಡಿಯೋ ವೈರಲ್

ಕ್ರಿಕೇಟಿಗ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರೂ, ಇಂದಿಗೂ ಐಪಿಎಲ್ ಪಂದ್ಯ ಆಡಲೆಂದು ಕ್ರೀಡಾಂಗಣಕ್ಕೆ ಬಂದರೆ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ.

ಧೋನಿಗೆ ಸಂಬಂಧಿಸಿದ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅದರಲ್ಲಿ ಅಭಿಮಾನಿಯೊಬ್ಬರ ಬೈಕ್ ಅನ್ನು ಟೀ ಶರ್ಟ್ ನಿಂದ ಕ್ಲೀನ್ ಮಾಡುವುದನ್ನು ಕಾಣಬಹುದು.

ಇದನ್ನೂ ಓದಿ: ಓಟದ ಸ್ಫರ್ಧೆಯಲ್ಲಿ ಬಹುಮಾನ ಸಿಗದ ಕಾರಣಕ್ಕೆ ಯುವತಿ ಆತ್ಮಹತ್ಯೆ!

ವೈರಲ್​ ಆಗಿರುವ ಈ ವೀಡಿಯೋದಲ್ಲಿ ಅಭಿಮಾನಿಯೊಬ್ಬ ತಮ್ಮ ಬೈಕ್​ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳುತ್ತಿರುವುದು ಕಂಡು ಬಂದಿದೆ. ಅಭಿಮಾನಿ ಕೋರಿಕೆಗೆ ಓಕೆ ಎಂದ ಧೋನಿ ಬೈಕ್​ ನೋಡಿ ಖುಷಿಪಟ್ಟು ಸಹಿ ಮಾಡುವ ಮೊದಲು ಸೂಪರ್ ಬೈಕ್ ಅನ್ನು ತಮ್ಮ ಟೀ ಶರ್ಟ್‌’ನಿಂದಲೇ ಕ್ಲೀನ್ ಮಾಡಿ ಬಳಿಕ ಸಹಿ ಮಾಡಿದ್ದಾರೆ.

Exit mobile version