Site icon PowerTV

ಸಂಖ್ಯಾಶಾಸ್ತ್ರದ ಪ್ರಕಾರ ಸಂಸದ ಪ್ರತಾಪ ಸಿಂಹ ಹೆಸರು ಇಂಗ್ಲಿಷ್‌ ನಲ್ಲಿ ಬದಲು

ಮೈಸೂರು: ಮೈಸೂರು ಮತ್ತು ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರು ತಮ್ಮ ಇಂಗ್ಲಿಷ್‌ ಹೆಸರಿನಲ್ಲಿ ಸಂಖ್ಯಾಶಾಸ್ತ್ರದ ಅನ್ವಯ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ.

ಹೌದು, Prathap simha ಎಂಬ ಹೆಸರನ್ನು ಅವರು Pratap simmha ಎಂದು ಬದಲಿಸಿಕೊಂಡಿರುವುದಾಗಿ ಅಫಿಡೆವಿಟ್‌ ಮೂಲಕ ಘೋಷಿಸಿಕೊಂಡಿದ್ದಾರೆ.

ಸಂಖ್ಯಾಶಾಸ್ತ್ರದ ಅನ್ವಯ ಸಣ್ಣ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಅನೇಕ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಕೆಲವು ರಾಜಕಾರಣಿಗಳು ಸಂಖ್ಯಾಶಾಸ್ತ್ರ ಮತ್ತು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬದಲಿಸಿಕೊಂಡ ಉದಾಹರಣೆ ಇದೆ.

ಇದನ್ನೂ ಓದಿ: ಕಂಬಳ ನೋಡಿ ವಾಪಸಾಗುವಾಗ ಕಾರು-ಲಾರಿ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು

ಈ ಹಿಂದೆ ಮೈಸೂರು- ಕೊಡಗು ಮಾಜಿ ಸಂಸದ, ಹಾಲಿ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಸೇರಿಸಿಕೊಂಡಿದ್ದರು. MP ಚುನಾವಣೆಗೂ ರಾಜ್ಯಾಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ ಎಂದರು.

 

Exit mobile version