Site icon PowerTV

ಬರ್ತ್ ಡೇಗೆ ದುಬೈಗೆ ಕರೆದೊಯ್ಯದ ಪತಿ : ಪತ್ನಿಯ ಒಂದೇ ಒಂದು ಪಂಚ್​ಗೆ ಹಾರಿ ಹೋಯ್ತು ಗಂಡನ ಪ್ರಾಣ

ಮಹಾರಾಷ್ಟ್ರ : ಹುಟ್ಟುಹಬ್ಬದ ಸಂಭ್ರಮಾಚರಣೆಗೆಂದು ಗಂಡ ತನ್ನನ್ನು ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣ ಪತ್ನಿ ಪತಿಯ ಮೂಗಿಗೆ ಗುದ್ದಿದ್ದಾರೆ. ಇದರಿಂದ ಗಂಡ ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ರಿಯಲ್​​ ಎಸ್ಟೆಟ್ ಉದ್ಯಮಿ ನಿಖಿಲ್ ಖನ್ನಾ ಮೃತ ಪತಿ. ಈತನ ಸಾವಿಗೆ ಕಾರಣಳಾದ ಪತ್ನಿ ರೇಣುಕಾ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಪುಣೆಯ ವನವಡಿ ಪ್ರದೇಶದ ಐಷಾರಾಮಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿರುವ ಅಪಾರ್ಟ್‌ಮೆಂಟ್​ನಲ್ಲಿ ರಿಯಲ್​​ ಎಸ್ಟೆಟ್ ಉದ್ಯಮಿ ನಿಖಿಲ್ ಖನ್ನಾ ದಂಪತಿ ನೆಲೆಸಿದ್ದರು. 6 ವರ್ಷಗಳ ಹಿಂದೆ ನಿಖಿಲ್ ಖನ್ನಾ ರೇಣುಕಾ ಅವರನ್ನು ಪ್ರೇಮಿಸಿ ವಿವಾಹವಾಗಿದ್ದರು. ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಬೇಕು ಹಾಗೂ ತಮಗೆ ಪತಿ ದುಬಾರಿ ಉಡುಗೊರೆ ಕೊಡಬೇಕು ಎಂದು ರೇಣುಕಾ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ, ಅದಕ್ಕೆ ನಿಖಿಲ್ ಖನ್ನಾ ನಿರಾಕರಿಸಿದ್ದರು.

ಶುಕ್ರವಾರ ಇದೇ ವಿಷಯಕ್ಕೆ ಪತಿ ಪತ್ನಿಯ ನಡುವೆ ಜೋರು ಜಗಳವಾಗಿದೆ. ಸಿಟ್ಟಿಗೆದ್ದ ರೇಣುಕಾ, ಕೋಪದ ಭರದಲ್ಲಿ ಪತಿ ನಿಖಿಲ್‌ನ ಮುಖಕ್ಕೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ನಿಖಿಲ್‌ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದು ಹೋಗಿದೆ. ಅಲ್ಲದೆ, ತೀವ್ರ ರಕ್ತಸ್ರಾವದಿಂದ ನಿಖಿಲ್ ಮೃತಪಟ್ಟಿದ್ದಾರೆ. ಪೊಲೀಸರು ರೇಣುಕಾರನ್ನು ಬಂಧಿಸಿ IPC ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Exit mobile version