Site icon PowerTV

ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ಬಗ್ಗೆ ಶ್ರೀರಾಮುಲು ಹೇಳಿದ್ದೇನು?

ಬಳ್ಳಾರಿ : ಬಿಜೆಪಿ ಪಾರ್ಟಿಯನ್ನು ಒಬ್ಬ ರಾಮುಲು ಮಾತ್ರ ಕಟ್ಟಿಲ್ಲ. ಯಾರೇ ಬಂದರೂ ಪಾರ್ಟಿಗೆ ಅನುಕೂಲ ಆಗಲಿ ಎಂದು ಬಯಸುವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ವಿಚಾರದ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕೊಟ್ಯಂತರ ಕಾರ್ಯಕರ್ತರ ಶ್ರಮದಿಂದ ಇವತ್ತು ಇಷ್ಟು ದೊಡ್ಡ ಪಾರ್ಟಿ ಆಗಿ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಯಾರನ್ನೂ ಸೇರಬೇಡ ಎನ್ನಲು ನನಗೆ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.

ನೂರು ಅಲ್ಲ, ಸಾವಿರ ಜನ ಬಂದರೂ ನಮ್ಮ ಪಾರ್ಟಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸರ್ವಾಧಿಕಾರ ಇದೆ. ಹೀಗಾಗಿ, ನನ್ನ ಅಭ್ಯಂತರವಿಲ್ಲ. ನಾನು ಜೀವನದಲ್ಲಿ ಯಾವತ್ತೂ ದ್ವೇಷ ಹಾಗೂ ಅಸೂಹೆ ರಾಜಕಾರಣ ಮಾಡಿಲ್ಲ‌. ಯಾರಾದರೂ ಬರುತ್ತಾರೆ ಎಂದರೆ ಬೇಡ ಎನ್ನುವುದಕ್ಕೆ ನಾನು ಯಾರು? ಪಾರ್ಟಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ವೈಯಕ್ತಿಕ ತೀರ್ಮಾನ, ಅಭಿಪ್ರಾಯ ಇರಲ್ಲ ಎಂದು ತಿಳಿಸಿದ್ದಾರೆ.

Exit mobile version