Site icon PowerTV

ನಾನೇನು ಕುರುಡನಾ? ಸೋಮಣ್ಣಗೆ ಸೀಟ್ ಕೊಡಿ ಅಂದ್ರೆ ಕೊಡ್ತಾರಾ? : ಜಿ.ಎಸ್. ಬಸವರಾಜ್

ತುಮಕೂರು : ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ನೀಡಿ ಅಂತಾ ವರಿಷ್ಠರ ಬಳಿ ನೀವು ಕೇಳ್ತಿರಾ? ಎಂಬ ಪ್ರಶ್ನೆಗೆ ಸಂಸದ ಜಿ.ಎಸ್. ಬಸವರಾಜ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಾನೇನು ಕುರುಡನಾ? ಅವರು ಕೇಳಿದಾಗ ಏನು ಹೇಳಬೇಕು, ಆಗ ಉತ್ತರ ಕೊಡ್ತಿನಿ ಎಂದು ಹೇಳಿದ್ದಾರೆ.

ಸೋಮಣ್ಣರಿಗೆ ತುಮಕೂರು ಲೋಕಸಭಾ ಟಿಕೆಟ್ ನೀಡಿದ್ರೆ ಶಿರಾಸಾವಹಿಸಿ ಕೆಲಸ ಮಾಡ್ತಿವಿ. ಅವರು ಇಲ್ಲಿ ಎರಡು ಬಾರಿ ಜಿಲ್ಲಾ ಮಂತ್ರಿಗಳು ಆಗಿದ್ದವರು. ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ವಿರುದ್ಧ ನನ್ನ ಚುನಾವಣೆಯಲ್ಲಿ ಉಸ್ತುವಾರಿ ಆಗಿದ್ದರು. ನೂರಕ್ಕೆ ನೂರು ನನ್ನ ಭವಿಷ್ಯ ಅವರ ಮೇಲಿತ್ತು, ನನ್ನನ್ನು ಗೆಲ್ಲಿಸಿದ್ರು ಎಂದು ತಿಳಿಸಿದ್ದಾರೆ.

ಬ್ಯಾಟ್ ಬಿಸೋದು, ಗಿಸೋದು ಏನು ಇಲ್ಲ

ಸೋಮಣ್ಣ ದೆಹಲಿಗೆ ತೆರಳುವ ವಿಚಾರ ಕುರಿತು ಮಾತನಾಡಿ, ಡಿಸೆಂಬರ್ 7 ರಂದು ನಾನು ದೆಹಲಿಯಲ್ಲಿ ಇರ್ತಿನಿ, ಪಾರ್ಲಿಮೆಂಟ್ ಇರುತ್ತದೆ. ಪಾರ್ಟಿ ಯಾರಿಗೆ ಟಿಕೆಟ್ ಕೊಡ್ತಾರೋ ಅವರ ಪರ ಕೆಲಸ ಮಾಡ್ತಿವಿ. ಸೋಮಣ್ಣ ಪರ‌ ಬ್ಯಾಟ್ ಬಿಸೋದು ಗಿಸೋದು ಏನು ಇಲ್ಲ. ದೆಹಲಿಗೆ ಹೋಗಿ ನಾನು ಇವರಿಗೆ (ಸೋಮಣ್ಣರಿಗೆ) ಸೀಟ್ ಕೊಡಿ ಅಂದ್ರೆ ಕೊಡ್ತಾರಾ? ಅದಕ್ಕೆ ನೀತಿ ನಿಯಮವಿದೆ, ಪಾರ್ಲಿಮೆಂಟರಿ ಬೋರ್ಡ್ ಇದೆ ಎಂದು ಸಂಸದ ಜಿ.ಎಸ್. ಬಸವರಾಜ್ ಜಾಣ್ಮೆಯ ಉತ್ತರ ನೀಡಿದ್ದಾರೆ.

Exit mobile version