Site icon PowerTV

ರೈಲಿನಡಿ ಸಿಲುಕ್ಕಿದ್ದ ಪ್ರಯಾಣಿಕನ ರಕ್ಷಣೆ ಮಾಡಿದ ಸಿಬ್ಬಂದಿ!

ಕಾರವಾರ: ರೈಲ್ವೆ ಬೋಗಿಯಿಂದ ಕೆಳಗೆ ಬಿದ್ದು ಅಪಾಯಕ್ಕೆ ಸಿಲುಕ್ಕಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿಯೊಬ್ಬರು ರಕ್ಷಿಸಿದ ಘಟನೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು ಮೂಲಕ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ ಎಂಬವರು ಪ್ಲಾಟ್‍ಫಾರಂ ಒಂದರಲ್ಲಿ ಲಗೇಜು ತೆಗೆದುಕೊಳ್ಳಲು ಟ್ರೈನ್‍ನಿಂದ ದೇಸಾಯಿ ಅವರು ಇಳಿಯುವಾಗ ಟ್ರೈನ್ ಹೊರಟಿದ್ದರಿಂದ ಆಯಾತಪ್ಪಿ ಬಿದ್ದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ನರೇಶ್ ಎಂಬವರ ಸಮಯ ಪ್ರಜ್ಞೆಯಿಂದ ಇವರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ನಟಿ ಲೀಲಾವತಿ ಕನಸಿನ ಪಶು ಆಸ್ಪತ್ರೆ ನ.26ಕ್ಕೆ ಉದ್ಘಾಟನೆ!

ಚಿಕ್ಕಪುಟ್ಟ ಗಾಯವಾಗಿದ್ದ ಅವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ರೈಲ್ವೆ ಇನ್ಸ್​ ಪೆಕ್ಟರ್ ನೀಲೇಶ್ ದುಬೆ ಅವರ ಸಹಾಯದಿಂದ ಮತ್ತೊಂದು ಟ್ರೈನ್ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ರೈಲ್ವೆ ಇಲಾಖೆ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ.

Exit mobile version