Site icon PowerTV

ಕಾಂತಾರ ಸಿನಿಮಾದ ಫಸ್ಟ್ ಲುಕ್ ನ.27ಕ್ಕೆ ರಿಲೀಸ್​!

ಕಾಂತಾರ ಸಿನಿಮಾ ಟೀಮ್​​​ನಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಿನಿಮಾದ ಮುಹೂರ್ತದ ದಿನದಂದೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ.

ರಿಷಬ್ ಶೆಟ್ಟಿ ಫಸ್ಟ್ ಲುಕ್ ಗಾಗಿ ಮಾಡಿದ ಪೋಸ್ಟರ್​​​ನಲ್ಲಿ ಇದು ಬರಿ ಬೆಳಕಲ್ಲ, ದರ್ಶನ ಎಂದು ಟ್ಯಾಗ್ ಲೈನ್ ಕೊಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ. ಸಿನಿಮಾ ಟೀಮ್ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗದೇ ಇದ್ದರೂ, ಬಲ್ಲ ಮೂಲಗಳು ಮಾಹಿತಿಯನ್ನು ಹೊರ ಹಾಕುತ್ತಲೇ ಇವೆ.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಚಾಲನೆ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಹಿಟ್ ಆದ ನಂತರ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ, ಕಾಂತಾರ 2 ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಹಾಗಾಗಿ ಅದ್ಧೂರಿ ಮೇಕಿಂಗ್ ಕೂಡ ಇರಲಿದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿದೆ.

Exit mobile version