Site icon PowerTV

ಶಬರಿಮಲೆ : ಸ್ವಾಮಿ ಅಯ್ಯಪ್ಪ ಭಕ್ತರಿಗೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು : ದಕ್ಷಿಣ ಭಾರತದ ಅತಿ ಹೆಚ್ಚು ಜನಸಂದಣಿಯಾಗುವ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಶಬರಿಮಲೆಯೂ ಒಂದು. ಇಲ್ಲಿಗೆ ಬರುವ ಯಾತ್ರಾರ್ಥಿಗಳ ಸುರಕ್ಷತೆಯ ಸಲುವಾಗಿ ಇದೀಗ ಅಗ್ನಿಶಾಮಕ ರಕ್ಷಣಾ ಸೇನೆ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರು ಸಜ್ಜಾಗಿದ್ದಾರೆ.

ಪಂಪಾ ನಿಯಂತ್ರಣ ಕೊಠಡಿಗಳಡಿ 14 ಮತ್ತು ನೀಲಕ್ಕಲ್​ನಿಂದ ಕಾಳಕಟ್ಟಿವರೆಗೆ 25 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಒಟ್ಟಾರೆ 295 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜೊತೆಗೆ ಶಬರಿಮಲೆ ಪರಿಸರದಲ್ಲಿ ಸಂಭವನೀಯ ಅಪಾಯ ತಪ್ಪಿಸಲು ಮಾರ್ಗಸೂಚಿಗಳನ್ನು ಸಹ ಬಿಡುಗಡೆಗೊಳಿಸಲಾಗಿದೆ.

ಸನ್ನಿಧಾನಂ-ಪಂಪಾ ನಿಯಂತ್ರಣ ಕೊಠಡಿಗಳಡಿ 14 ಅಗ್ನಿಶಾಮಕ ಕೇಂದ್ರ ಮತ್ತು ನೀಲಕ್ಕಲ್‌ನಿಂದ ಕಾಳಕಟ್ಟಿವರೆಗೆ 25 ಅಗ್ನಿಶಾಮಕ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಈ ಎಲ್ಲ ಮಅಗ್ನಿಶಾಮಕ ಕೇಂದ್ರಗಳಲ್ಲಿ ಏಕಕಾಲದಲ್ಲಿ 295 ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ. ಶಬರಿಮಲೆ ಪರಿಸರದಲ್ಲಿ ಸಂಭವನೀಯ ಅಪಾಯ ತಪ್ಪಿಸಲು ಅಗ್ನಿಶಾಮಕ ದಳ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ

Exit mobile version