Site icon PowerTV

ಆಜಾನ್ ಸದ್ದು ಕೇಳಿ ಅರ್ಧಕ್ಕೆ ಮಾತು ನಿಲ್ಲಿಸಿದ ಪರಮೇಶ್ವರ್

ತುಮಕೂರು : ಮಸೀದಿಯ ಆಜಾನ್ ಸದ್ದು ಕೇಳಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಮಾತು ನಿಲ್ಲಿಸಿ ಗೌರವ ಸಲ್ಲಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಪರಮೇಶ್ವರ್ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಪಕ್ಕದಲ್ಲಿದ್ದ ಮಸೀದಿಯಿಂದ ಆಜಾನ್ ಕೂಗಲಾಯಿತು. ಈ ಸದ್ದು ಕೇಳಿದ ಕೂಡಲೇ ಪರಮೇಶ್ವರ್ ಅರ್ಧಕ್ಕೆ ಮಾತು ನಿಲ್ಲಿಸಿ ಕೆಲಕಾಲ ಮೌನವಾಗಿ ಕುಳಿತರು.

ಸುಮಾರು ಒಂದು ನಿಮಿಷ ಕಾಲ ತಲೆ ಬಾಗಿಸಿ ಮೌನವಾಗಿ ಸುಮ್ಮನೆ ಕುಳಿತ ಅವರು, ಆಜಾದ್ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತು ಮುಂದುವರಿಸಿದ್ದಾರೆ. ವಸ್ತು ಕಳವು ಪ್ರಕರಣದಲ್ಲಿ ತುಮಕೂರು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿರುವ ಸ್ವತ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಆಜಾನ್ ಕೂಗುತ್ತಿದ್ದಂತೆ ಪರಮೇಶ್ವರ್ ಅದಕ್ಕೆ ಗೌರ ಸೂಚಿಸಿದ್ದಾರೆ.

Exit mobile version