Site icon PowerTV

‘ಗೊಂಬೆ ಆಡುತ್ತೈತೆ’ ಎನ್ನುವ ಹಾಗೆ ಡಿಕೆಶಿಗೆ ಹೊಸ ಹಾಡು ಬರೆಯಬೇಕು : ಮಾಜಿ ಸಚಿವ ಶ್ರೀರಾಮುಲು

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ‌. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರವನ್ನೇ ಡಿ.ಕೆ. ಶಿವಕುಮಾರ್ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಾದ ರೀತಿಯಲ್ಲಿ ಸರ್ಕಾರವನ್ನು ಬುಗರಿಯಂತೆ ಆಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿ.ಕೆ. ಶಿವಕುಮಾರ್​ ಅವರಿಗಾಗಿ‌ ಮತ್ತೊಮ್ಮೆ ಹೊಸ ಹಾಡು ಬರೆಯಬೇಕು. ಸರ್ಕಾರ ಮತ್ತು ಕಾನೂನಿನ‌‌ ಮಧ್ಯೆ ತಿಕ್ಕಾಟ, ಭಿನ್ನಾಪ್ರಾಯ ಪ್ರಾರಂಭವಾಗಿದೆ. ಸರ್ಕಾರ ಮತ್ತು ಕಾನೂನು ಮಧ್ಯೆ ದೊಡ್ಡ ಆತಂಕ ನಿರ್ಮಾಣವಾಗಿದೆ. ಡಿ.ಕೆ. ಶಿವಕುಮಾರ್ ಮುಂದೆ ಸರ್ಕಾರನೇ ತಲೆಬಾಗುತ್ತಿದೆನಾ? ಅಥವಾ ಸರ್ಕಾರದ ಮುಂದೆ ಇವರು ತಲೆ ಭಾಗ್ತಿದ್ದಾರಾ ಗೊತ್ತಾಗ್ತಿಲ್ಲ ಎಂದು ಕುಟುಕಿದ್ದಾರೆ.

ಸರ್ಕಾರನೇ ಅವರ ಕೆಳಗಡೆ ಇಡ್ಕೊಡಿದ್ದಾರೆ

ಡಿ.ಕೆ. ಶಿವಕುಮಾರ್ ಅವರು ತಪ್ಪು ಮಾಡಿಲ್ಲ ಅಂದ್ರೆ ಹೊರಗೆ ಬರುವ ವಿಶ್ವಾಸ ಇರಬೇಕಿತ್ತು. ಇವತ್ತು ಸರ್ಕಾರನೇ ಡಿಕೆಶಿ ಮುಂದೆ ತಲೆಬಾಗಿದಂತೆ ಕಾಣ್ತಾ ಇದೆ. ಸರ್ಕಾರನೇ ಅವರ ಕೆಳಗಡೆ ಇಡ್ಕೊಡಿದ್ದಾರೆ. ಹೀಗಾಗಿ, ಇಷ್ಟೊಂದು ದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಸಚಿವ ಸಂಪುಟದ ನಿರ್ಧಾರವನ್ನು ಶ್ರೀರಾಮುಲು ಖಂಡಿಸಿದ್ದಾರೆ.

Exit mobile version