Site icon PowerTV

Bigg Boss Season 10: ಜೈಲಿನಿಂದ ಎಸ್ಕೇಪ್​ ಆದ ವರ್ತೂರ್‌ ಸಂತೋಷ್‌!

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳು ದಿನದಿಂದ ದಿನಕ್ಕೆ ಅಗ್ರೆಸಿವ್‌ ಆಗುತ್ತಲೇ ಇದ್ದಾರೆ. ವರ್ತೂರ್‌ ಸಂತೋಷ್‌ ಹುಲಿ ಉಗುರು ಕೇಸ್‌ನಲ್ಲಿ ಜೈಲಿಗೆ ಸೇರಿ ಮತ್ತೆ ಜಾಮೀನು ಮೂಲಕ ಹೊರಗೆ ಬಂದರು. ಆದರೀಗ ಮನೆಯ ಸದಸ್ಯರು ವರ್ತೂರ್‌ ಅವರಿಗೆ ಕಳಪೆಯನ್ನು ಕೊಟ್ಟು ಜೈಲಿಗೆ ಸೇರುವಂತೆ ಮಾಡಿದ್ದಾರೆ. ವರ್ತೂರ್‌ ಕೂಡ ಕಂಬಿಯಿಂದ ತಪ್ಪಿಸಿಕೊಂಡಿದ್ದಾರೆ.
ಮನೆಯ ಸ್ಪರ್ಧಿಗಳು ಒಮ್ಮತದಿಂದ ಕಳಪೆ ಎಂದು ಹೆಸರಿಸಿ ಮನೆಯ ಒಳಗೆ ಇರುವ ಜೈಲಿನಲ್ಲಿ ಇರಿಸಲಾಗುತ್ತದೆ. ಹಾಗೆಯೇ ಈ ವಾರ ಮನೆಯ ಸದಸ್ಯರು ಹಲವರು ವರ್ತೂರು ಸಂತೋಷ್ ಅವರು ಕಳಪೆ ಎಂದು ನಿರ್ಧರಿಸಿ ಅವರನ್ನು ಕ್ಯಾಪ್ಟನ್ ಕಾರ್ತಿಕ್ ಜೈಲಿಗೆ ಹಾಕಿದ್ದಾರೆ. ʻʻಈ ಸಮಯದಲ್ಲಿ ಮಾತನಾಡಿರುವ ವರ್ತೂರು ಸಂತೋಷ್, ಕಳಪೆ ಮಾತ್ರವಲ್ಲ, ವಿಷಕಾರಿ ಎಂದು ಬೇಕಾದರೂ ನನ್ನನ್ನು ಕರೆಯಿರಿ ನನ್ನ ವ್ಯಕ್ತಿತ್ವ ಎಂಥಹದ್ದು ಎಂಬುದು ನನಗೆ ಗೊತ್ತು ಇಲ್ಲೆಲ್ಲ ನಡೆಯುವುದು ನರಿ ಸಂಚುʼ ಎಂದು ಹೇಳಿಕೊಂಡಿದ್ದಾರೆ.
ಜೈಲಿನ ಹೊರಗೆ ಕುಳಿತಿದ್ದ ತುಕಾಲಿ ಸಂತು ಬಳಿ ಮಾತನಾಡುತ್ತಾ, ʻʻʻಈ ವರೆಗೆ ಯಾರೂ ಜೈಲಿನಿಂದ ಹೊರಗೆ ಬಂದಿಲ್ಲ ಅಲ್ಲವಾ?ʼʼ ಎಂದು ವರ್ತೂರು ಪ್ರಶ್ನೆ ಮಾಡಿದ್ದಾರೆ. ಆಗ ತುಕಾಲಿ, ʻʻಈವರೆಗೆ ಯಾರೂ ಬಂದಿಲ್ಲ, ಬಂದು ಬಿಡಣ್ಣ ನೋಡೋಣ” ಎಂದು ತುಕಾಲಿ ಹೇಳಿದರು. ವರ್ತೂರು ಸಂತೋಷ್, ಜೈಲಿನ ಸರಳುಗಳ ಮಧ್ಯದಿಂದ ತೂರಿಕೊಂಡು ಹೊರಗೆ ಬಂದಿದ್ದಾರೆ. ವರ್ತೂರು ಸಂತೋಷ್ ಜೈಲಿನಿಂದ ತಪ್ಪಿಸಿಕೊಂಡಿರುವುದನ್ನು ಇದೀಗ ಕಲರ್ಸ್‌ ಕನ್ನಡ ವಾಹಿನಿ ಪ್ರೋಮೊ ಹಂಚಿಕೊಂಡಿದೆ.

ವರ್ತೂರ್‌ ಸಂತೋಷ್‌, ನೀತು, ಸಂಗೀತಾ ಅವರ ಒಂದು ಟೀಂ ಆಗಿದೆ. ವಿನಯ್‌ ತಂಡದಲ್ಲಿ ಎಷ್ಟೇ ಸೋತರು. ಗ್ರೂಪಿಸಮ್‌ನಲ್ಲಿ ಸೋತ ತಂಡಕ್ಕೆ ವೋಟ್‌ ಮಾಡಿ ಕಳಪೆ ಕೊಟ್ಟು ಜೈಲಿಗೆ ಹಾಕುತ್ತಾರೆ. ಇದೀಗ ಈ ವಾರ ವರ್ತೂರ್‌ ಸಂತೋಷ್‌ ಕಳಪೆ ಆಗಿದ್ದಾರೆ. ವರ್ತೂರ್‌ ಸಂತೋಷ್‌ ಜತೆ ಹತ್ತಿರವಾಗುತ್ತಿದ್ದ ಸಂಗೀತಾ ಕೂಡ ವಿನಯ್‌ ಅವರ ಗುಂಪಿನಲ್ಲಿ ಹೆಚ್ಚಾಗಿ ಇರುತ್ತಿದ್ದಾರೆ. ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version