Site icon PowerTV

ವಿಜಯೇಂದ್ರ ನನ್ನನ್ನು ಭೇಟಿ ಮಾಡುವ ನಾಟಕ ಬೇಡ : ಶಾಸಕ ಯತ್ನಾಳ್

ವಿಜಯಪುರ : ಬಿಜೆಪಿಯಲ್ಲಿನ ಆಂತರಿಕ ಬೇಗುದಿ ಮುಂದುವರಿದಿದೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುನಿಸಿಕೊಂಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಬಂದು ನನ್ನ ಭೇಟಿ ಆಗುವ ನಾಟಕ ಮಾಡುವುದು ಬೇಡ. ಎಲ್ಲ ಸರಿಯಾಗಿದೆ ಎಂದು ಹೇಳಿ ಹೋಗುವುದು ಬೇಡ. ವಿಜಯೇಂದ್ರ ಮೊದಲು ಏನೇನು ನನಗೆ ಅಡೆತಡೆ ಮಾಡಿದ್ದಾರೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಗೆ ಬಂದ ಅನುದಾನವನ್ನು ವಾಪಸ್ ಪಡೆದರು. ಈಗ ಸರಿ ಮಾಡೋಣ ಅಂದ್ರೆ ಆಗಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಾ ನಿರ್ಧಾರ ಆಗುತ್ತೆ ಎಂದು ಯತ್ನಾಳ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಿ.ವೈ ವಿಜಯೇಂದ್ರ ಅವನ್ನು ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದ ಬಳಿಕ ಕೆಲವು ನಾಯಕರುಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೋರ್ಟ್ ಮೆಟ್ಟಿಲೇರುತ್ತೇನೆ

ಕ್ಯಾಬಿನೆಟ್​​ನಲ್ಲಿ ನಿನ್ನೆ ತೆಗೆದುಕೊಂಡ ನಿರ್ಧಾರ ಅಕ್ರಮ. ಈಗಾಗಲೇ ಶೇ.90 ರಷ್ಟು ಸಿಬಿಐ ತನಿಖೆಯಾಗಿದೆ. ಕೇಂದ್ರ ಸರ್ಕಾರದ ಒತ್ತಾಯದ ಮೇಲೆ ಸಿಬಿಐ ತನಿಖೆಗೆ ಕೊಡೋ ನಿರ್ಣಯವಾಗಿತ್ತು. ನಂತರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸ್ಕ್ವ್ಯಾಶ್ ಮಾಡಲಾಗಿತ್ತು. ಬಳಿಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​​ಗೆ ಹೋಗಿತ್ತು. ಅದರ ಮೇಲಿನ ಸ್ಟೇ‌ ಕೊಟ್ಟ ಬಳಿಕ ಸಿಬಿಐ ತನಿಖೆ ಚುರುಕಾಗಿದೆ. ಈ‌ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ‌ ನ್ಯಾಯಾಲಯದ ಮೊರೆ ಹೋಗುವೆ ಎಂದು ಹೇಳಿದ್ದಾರೆ.

Exit mobile version