Site icon PowerTV

ಅಭಿ ಪೊಲೀಸ್ ಗೆಟಪ್, ಅವನ ಧ್ವನಿ ಕೇಳಿದ್ರೆ ಅಂಬರೀಶ್ ನೋಡಿದಾಗೆ ಅನಿಸುತ್ತೆ : ಸುಮಲತಾ

ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಅವರ 5ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಬಳಿ ಇರುವ ಅಂಬರೀಶ್ ಸಮಾಧಿಗೆ ಪತ್ನಿ ಹಾಗೂ ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಪೂಜೆ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಅಂಬರೀಶ್ ಅವರ ಪುಣ್ಯಸ್ಮರಣೆ ದಿನದಂದೇ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ತೆರೆಗೆ ಬಂದಿದೆ ಎಂದು ಪತಿ ಅಂಬರೀಶ್ ನೆನೆದು ಸುಮಲತಾ ಅಂಬರೀಶ್ ಭಾವುಕರಾದರು.

ಅಂಬರೀಶ್ ನಮ್ಮನ್ನ ಅಗಲಿ ಐದು ವರ್ಷ ಆಗಿದೆ. ಇವತ್ತು ತುಂಬಾನೇ ಎಮೋಷನಲ್ ದಿನ. ಪ್ರತಿನಿತ್ಯ ಅವರ ನೆನಪುಗಳು ನಮಗೆ ಶಕ್ತಿ ಮತ್ತು ಸ್ಫೂರ್ತಿ. ಇವತ್ತು ಅಭಿಷೇಕ್ ನಟನೆ ಮಾಡಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಆಗ್ತಿದೆ. ಈ ಸಿನಿಮಾ ಕಂಪ್ಲೀಟ್ ಆಗೋವರೆಗೂ ಸಾಕಷ್ಟು ಸವಾಲುಗಳು ಇತ್ತು. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮಗನ ಸಿನಿಮಾಕ್ಕೆ ಅಂಬರೀಶ್ ಆಶೀರ್ವಾದ ಇರುತ್ತೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? : ಈ ಹಿಂದೆ ಡ್ರಗ್ಸ್ ಇತ್ತು, ಈ ಸಿನಿಮಾದಲ್ಲಿ ಗನ್ ಇದೆ : ನಟ ದರ್ಶನ್

ಸೂರಿ ಮ್ಯಾಜಿಕ್ ಸಿನಿಮಾದಲ್ಲಿ ಕಾಣುತ್ತೆ

ನಿರ್ದೇಶಕ ಸೂರಿ ಅವರ ಮ್ಯಾಜಿಕ್ ಸಿನಿಮಾದಲ್ಲಿ ಎದ್ದು ಕಾಣುತ್ತೆ. ಅಭಿಷೇಕ್ ಅಂಬರೀಶ್​ನ ಇನ್ಸ್​ಪೆಕ್ಟರ್ ಯೂನಿಫಾರ್ಮ್ ತುಂಬಾ ಖುಷಿ ಕೊಡುತ್ತೆ. ಅಭಿಷೇಕ್ ನನ್ನು ಪೊಲೀಸ್ ಗೆಟಪ್​ನಲ್ಲಿ ನೋಡಿದ್ರೆ, ಅವನ ಧ್ವನಿ ಕೇಳಿದ್ರೆ ಅಂಬರೀಶ್ ಅವರನ್ನೇ ನೋಡಿದಾಗೆ ಅನಿಸುತ್ತೆ. ಅಂಬರೀಶ್ ಅಭಿಮಾನಿಗಳಿಗೆ ಇದು ತುಂಬಾ ಖುಷಿ ಕೊಡುತ್ತೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

Exit mobile version