Site icon PowerTV

ಕೊಡಲಿ ರೂಪದ ಪೆನ್ಸಿಲ್​ ಹಿಡಿದ ಶಾಲಾ ಮಕ್ಕಳು: ಪೋಷಕರು ಆಕ್ರೋಶ !

ಮಂಗಳೂರು:  ಬಂಟ್ವಾಳದ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್ ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಗಡಿಯಾರ ಎಂಬಲ್ಲಿ ನಡೆದಿದೆ.

ಇಲ್ಲಿನ ಕೆದಿಲ ಗ್ರಾಮದ ಗಡಿಯಾರ ಸರಕಾರಿ ಶಾಲ ಮಕ್ಕಳ ಬಳಿ ಕೊಡಲಿ ರೂಪದ ಪೆನ್ಸಿಲ್ ಗಳು ಪತ್ತೆಯಾಗಿದ್ದು ಮಕ್ಕಳ ಕೈಗೆ ಅಥವಾ ಇತರರಿಗೆ ಗಾಯವಾಗುವ ಅವಕಾಶಗಳೇ ಹೆಚ್ಚು ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ಕಾರ್ಪೊರೇಟ್ ‌ನೀತಿಗಳು ದುಡಿಯುವ ಜನರ ಬದುಕುಗಳನ್ನು ಕಸಿಯುತ್ತಿವೆ: ಆರ್.ಚಂದ್ರತೇಜಸ್ವಿ ಆರೋಪ

ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳ ಮಾರಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ. ಸಣ್ಣ ಮಕ್ಕಳ ಕೈಗೆ ಕೊಡಲಿ ರೂಪದ ಪೆನ್ಸಿಲ್ ನೀಡಿದರೆ ಅವರ ಭಾವನೆಗಳ ಮೇಲೆ ಪ್ರಭಾವ ಬೀರುವ ಬಗ್ಗೆ ತಿಳಿಯದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version