Site icon PowerTV

ವಿಮಾನದಲ್ಲೇ ಹರೇಕಳ ಹಾಜಬ್ಬರಿಗೆ ಸನ್ಮಾನ!

ಮಂಗಳೂರು: ‘ಅಕ್ಷರ ಸಂತ’ ಎಂದೇ ಹೆಸರುವಾಸಿಯಾಗಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ವಿಮಾನದಲ್ಲಿ ಕಂಡ ಸಿಬ್ಬಂದಿ ಅವರನ್ನು ಸನ್ಮಾನಿಸಿರುಗ ಘಟನೆ ನಡೆದಿದೆ.

ಹಿದಾಯ ಫೌಂಡೇಶನ್ ಜುಬೈಲ್ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ದಮ್ಮಾಮ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸಿಬ್ಬಂದಿ ಸನ್ಮಾನಿಸಿ ಶ್ಲಾಘಿಸಿದರು.

ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯನ್ನು ಮಡಿಲಲ್ಲಿ ಹೊತ್ತೊಯ್ದ ಬೆಕ್ಕು!: ಜನರ ಮೆಚ್ಚುಗೆ

ಹಾಜಬ್ಬ ಅವರು ಮಂಗಳೂರಿನಿಂದ ದಮಾಮ್‌ಗೆ ತೆರಳುತ್ತಿದ್ದರು. ಹಾಜಬ್ಬನನ್ನು ಗುರುತಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿ, ವಿಮಾನದ ಕ್ಯಾಪ್ಟನ್ ಗಮನಕ್ಕೆ ತಂದರು. ವಿಮಾನದ ಕ್ಯಾಪ್ಟನ್ ಹಾಜಬ್ಬ ಅವರನ್ನು ಪ್ರಯಾಣಿಕರಿಗೆ ಪರಿಚಯಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನಮ್ಮ ವಿಮಾನದಲ್ಲಿ ಹಾರಾಡುತ್ತಿರುವುದು ನಮಗೆ ಹೆಮ್ಮೆ ತಂದಿದೆ. ನಾವು ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದೇವೆ. ”ಎಂದು ಅಭಿನಂದಿಸಿದರು.

Exit mobile version