Site icon PowerTV

ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯನ್ನು ಮಡಿಲಲ್ಲಿ ಹೊತ್ತೊಯ್ದ ಬೆಕ್ಕು!: ಜನರ ಮೆಚ್ಚುಗೆ

ಪ್ರಾಣಿಗಳಿಂದ ಮನುಷ್ಯರು ಕಲಿಯಬೇಕಾದ ಜೀವನಪಾಠಗಳು ಸಾಕಷ್ಟಿವಿವೆ. ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಕಷ್ಟಕ್ಕೆ ಸ್ಪಂದಿಸುವಂತ ಅನೇಕ ಉದಾಹರಣೆಗಳನ್ನು ನಾವು ನೋಡಿರುತ್ತೇವೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.

ತಾಯಿಯಿಂದ ಬೇರ್ಪಟ್ಟ ಪುಟ್ಟ ಕೋತಿಮರಿಯನ್ನು ಬೆಕ್ಕೊಂದು ತನ್ನ ಮಡಿಲಿನಲ್ಲಿ ಹೊತ್ತಿಕೊಂಡು ತಿರುಗಿದೆ. ಮುಗ್ಧ ಪ್ರಾಣಿಗಳ ಈ ನಿಷ್ಕಲ್ಮಷ ಪ್ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯ ದೃಷ್ಟಿಯಿಂದ ತಾಯಿಯಿಂದ ಬೇರ್ಪಟ್ಟಿರುವ ಪುಟ್ಟ ಕೋತಿಮರಿಯನ್ನು ತನ್ನ ಸ್ವಂತ ಮಗುವಿನಂತೆಯೇ ಮಡಿಲಿನಲ್ಲಿ ಹೊತ್ತುಕೊಂಡು ತಿರುಗಿದೆ.

ಇದನ್ನೂ ಓದಿ: NEP ವಿರೋಧಕ್ಕೆ ಸಿ.ಟಿ ರವಿ ಖಂಡನೆ!

ಆ ಕೋತಿ ಮರಿ ಬೆಕ್ಕನ್ನೇ ತನ್ನ ತಾಯಿಯೆಂದು ಭಾವಿಸಿ ಬೆಕ್ಕನ್ನು ಗಟ್ಟಿಯಾಗಿ ತಬ್ಬಿಕೊಂಡಿರುವುದನ್ನು ಕಾಣಬಹುದು. ಈ ಎರಡು ಪ್ರಾಣಿಗಳ ಸುಂದರ ಬಾಂಧವ್ಯದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಿಕ್ಕಿದೆ.

Exit mobile version