Site icon PowerTV

ನನ್ನಂತೆಯೇ ಪ್ರದರ್ಶನ ನೀಡುವ ಇನ್ನೂ 10 ಬೌಲರ್​ಗಳು ಹುಟ್ಟಿಕೊಳ್ಳಲಿ : ಮೊಹಮ್ಮದ್ ಶಮಿ

ಮುಂಬೈ : ನನ್ನಂತೆಯೇ ಪ್ರದರ್ಶನ ನೀಡುವ ಇನ್ನೂ 10 ಬೌಲರ್‌ಗಳು ಹುಟ್ಟಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಭಾರತ ತಂಡ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಕೆಲ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಯಾರ ಬಗ್ಗೆಯೂ ಅಸೂಯೆ ಪಡುವುದಿಲ್ಲ. ನೀವು ಬೇರೆಯವರ ಯಶಸನ್ನು ಆನಂದಿಸಿದ್ರೆ, ಉತ್ತಮ ಆಟಗಾರರಾಗುತ್ತೀರಿ. ನನ್ನ ಪ್ರಕಾರ ಹೇಳುವುದಾದ್ರೇ ಸರಿಯಾದ ಸಮಯಕ್ಕೆ ಸೂಕ್ತ ಪ್ರದರ್ಶನ ನೀಡುವವರೇ ಉತ್ತಮ ಆಟಗಾರ ಎಂದು ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

ಕೆಲವರು ಅನಗತ್ಯ ವಿವಾದಗಳನ್ನ ಸೃಷ್ಟಿಸುತ್ತಿದ್ದಾರೆ. ಬೇರೆ ಬೇರೆ ಚೆಂಡುಗಳನ್ನು ಪಡೆಯುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ಬಹಳಷ್ಟು ಕೇಳುತ್ತಿದ್ದೇನೆ. ಆರಂಭಿಕ ಪಂದ್ಯಗಳಲ್ಲಿ ನಾನು ಆಡುವ 11ರ ಬಳಗದಲ್ಲಿ ಇರಲಿಲ್ಲ. ನನ್ನನ್ನು ತಂಡಕ್ಕೆ ಆಯ್ಕೆ ಮಾಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್‌ ಪಡೆದೆ. ಮುಂದಿನ 2 ಪಂದ್ಯಗಳಲ್ಲಿ ಕ್ರಮವಾಗಿ 4 ಮತ್ತು 5 ವಿಕೆಟ್‌ ಪಡೆದೆ. ಹಾಗಾಗಿ, ಪಾಕಿಸ್ತಾನದ ಕೆಲ ಆಟಗಾರರು ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

Exit mobile version