Site icon PowerTV

ಅಂತಾರಾಷ್ಟ್ರೀಯ ಟಿ-20ಗೆ ರೋಹಿತ್‌ ಗುಡ್‌ ಬೈ?

ಬೆಂಗಳೂರು: ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಅಜೇಯವಾಗಿ ಫೈನಲ್​ಗೆ ಮುನ್ನಡೆಸಿದ್ದ ರೋಹಿತ್ ಶರ್ಮಾ, ಫೈನಲ್ ಪಂದ್ಯದ ಸೋಲಿನ ಆಘಾತದೊಂದಿಗೆ ಸದ್ಯ ತಂಡದಿಂದ ದೂರ ಸರಿದಿದ್ದಾರೆ.

ಹೌದು, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ರೋಹಿತ್ ಸೇರಿದಂತೆ ತಂಡದ ಅನೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಎಂಗೇಜ್​ಮೆಂಟ್ ರಿಂಗ್ ಕಳೆದು ಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಅಲ್ಲದೆ ಚುಟುಕು ಮಾದರಿಯಿಂದ ದೂರ ಉಳಿಯುವ ನಿಟ್ಟಿನಲ್ಲಿ ಅವರು ಈಗಾಗಲೇ ಭಾರತೀಯ ಆಯ್ಕೆದಾರರೊಂದಿಗೆ ಮಾತನಾಡಿದ್ದಾರೆ ಎಂತಲೂ ವರದಿಯಲ್ಲಿ ಹೇಳಲಾಗಿದೆ. ಟಿ20 ಮಾದರಿಯಿಂದ ದೂರ ಉಳಿಯುವ ನಿಟ್ಟಿನಲ್ಲಿ ಆಯ್ಕೆಗಾರರೊಂದಿಗೆ ರೋಹಿತ್ ಶರ್ಮಾ ಮಾತನಾಡಿದ್ದು, ಬೇಕಿದ್ದರೆ ಟಿ20 ಕ್ರಿಕೆಟ್‌ನಲ್ಲಿ ನನ್ನ ಬಿಟ್ಟು ಮುಂದೆ ಯೋಚಿಸಬಹುದು ಎಂದು ಆಯ್ಕೆದಾರರಿಗೆ ರೋಹಿತ್ ಹೇಳಿದ್ದಾರೆ ಎಂದು ವರದಿಯಾಗಿದೆ

Exit mobile version