Site icon PowerTV

ಕರಾವಳಿಯಿಂದ ಬೆಂಗಳೂರಿನತ್ತ ಕೋಣಗಳ ಪ್ರಯಾಣ ಹೇಗಿರಲಿದೆ..?

ಬೆಂಗಳೂರು: ಕರಾವಳಿಯಲ್ಲಿ ಕೇಳಿ ಬರುತ್ತಿದ್ದ ಕಂಬಳದ ಕೊಂಬಿನ ಕಹಳೆ ಇನ್ನುಂದೆ ಬೆಂಗಳೂರಿನಲ್ಲಿಯೂ ಕೇಳಿಬರಲಿದೆ. ಹೌದು, 2023-24ರ ಕಂಬಳ ಸೀಸನ್ ಈಗಾಗಲೇ ಆರಂಭವಾಗಿದ್ದು,ನ.25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ.

ಪುತ್ತೂರು ಶಾಸಕ ಅಶೋಕ್ ರೈಗಳ ಸಾರಥ್ಯದಲ್ಲಿ ಬೆಂಗಳೂರು ಕಂಬಳಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಮೊದಲು ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ಮೊದಲ ಕಂಬಳ ನಡೆದಿದೆ. 189 ಜೋಡಿ ಕೋಣಗಳು ಈ ಕೂಟದಲ್ಲಿ ಭಾಗವಹಿಸಿದ್ದವು. ಇದೀಗ ಈ ಕೋಣಗಳು ಬೆಂಗಳೂರಿನತ್ತು ಪ್ರಯಾಣ ಬೆಳಸಿದ್ದಾವೆ.

ಉಪ್ಪಿನಂಗಡಿಯಿಂದ ಪ್ರಯಾಣ ಆರಂಭ

ಉಭಯ ಜಿಲ್ಲೆಯ ಎಲ್ಲಾ ಓಟದ ಕೋಣಗಳೊಂದಿಗೆ ಯಜಮಾನರುಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು  ಬೆಳಗ್ಗೆ 9 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯ ಕಾಲೇಜು ಮೈದಾನದಲ್ಲಿ ಸೇರಲಿದ್ದಾರೆ. ಅಲ್ಲಿ ಗಣಹೋಮ ನಡೆದು, ಬಳಿಕ ಉಪಹಾರ ಸೇವಿಸಿ 10.30ಕ್ಕೆ ಸರಿಯಾಗಿ ಬೆಂಗಳೂರು ಕಡೆ ಪ್ರಯಾಣ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಘಟನೆ : ಅಂತಿಮ ಹಂತದಲ್ಲಿ ರಕ್ಷಣಾ ಕಾರ್ಯ

ಓಟದ ಕೋಣಗಳಿಗೆ ಅನುಕೂಲವಾಗುವಂತೆ ಕರಾವಳಿಯಿಂದಲೇ ನೀರು, ಬೈಹುಲ್ಲು, ಹುರುಳಿಯನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ನೂರಕ್ಕೂ ಹೆಚ್ಚು ಲಾರಿಗಳು ಸಾಲಾಗಿ ಕರಾವಳಿಯ ಸಾಂಸ್ಕೃತಿಕ ಮೆರುಗನ್ನು ಹೊತ್ತು ರಾಜಧಾನಿಯತ್ತ ಸಾಗಲಿವೆ.

ಕೋಣಗಳಿಗೆ ವಿಶ್ರಾಂತಿ

ಕೋಣಗಳಿಗೆ ಮಧ್ಯಾಹ್ನ 2 ಗಂಟೆಯಿಂದ ಐದು ಗಂಟೆಯ ತನಕ ವಿರಾಮ ನೀಡಲಾಗಿದೆ. ಅಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಊಟೋಪಚಾರವೂ ಇಲ್ಲೇ ನಡೆಯಲಿದೆ. ಈ ವೇಳೆ ಕೋಣಗಳನ್ನು ಲಾರಿಯಿಂದ ಇಳಿಸಿ ವಿಶ್ರಾಂತಿ ನೀಡಲಾಗುವುದು.

ಸಂಜೆ ಐದು ಗಂಟೆಯಿಂದ ಹಾಸನದಿಂದ ಹೊರಟ ಕೋಣಗಳಿಗೆ ಚನ್ನರಾಯಪಟ್ಟಣದಲ್ಲಿ ಸ್ವಾಗತ. ನೀಡಲಾಗುವುದು. ಬಳಿಕ ನೆಲಮಂಗಲ ಬೆಂಗಳೂರು ಪ್ರವೇಶಿಸಿ ಸುಮಾರು 11 ಗಂಟೆಗೆ ಅರಮನೆ ಮೈದಾನಕ್ಕೆ ಆಗಮಿಸಲಿದೆ.

Exit mobile version