Site icon PowerTV

ಉಗ್ರರ ವಿರುದ್ದ ಎನ್​ಕೌಂಟರ್ : ಕರ್ನಾಟಕದ ಯೋಧ ಪ್ರಾಂಜಲ್‌ ಸೇರಿ ನಾಲ್ವರು ಹುತಾತ್ಮ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಜೌರಿಯಲ್ಲಿ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಕಾಳಗದಲ್ಲಿ ಕರ್ನಾಟಕ ಮೂಲದ ಕ್ಯಾಪ್ಟನ್ ಸೇರಿ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ. ಪ್ರಾಂಜಲ್, ದೆಹಲಿ ಪಬ್ಲಿಕ್ ಸ್ಕೂಲ್, MRPL ನ ಹಳೆಯ ವಿದ್ಯಾರ್ಥಿಯಾಗಿದ್ದರು.

ಘಟನೆಯ  ವಿವರ:  

ಭಯೋತ್ಪಾದಕರ ಬಗ್ಗೆ ನಿರ್ದಿಷ್ಟ ಮಾಹಿತಿ ಆಧರಿಸಿ ನವೆಂಬರ್ 19 ರಂದು ಕಲಾಕೋಟೆ ಪ್ರದೇಶದ ಗುಲಾಬ್ಗಢ ಅರಣ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಜಮ್ಮು ಮೂಲದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ನವೆಂಬರ್ 22 ರಂದು ಎನ್‌ಕೌಂಟರ್‌ ನಡೆದಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Exit mobile version