Site icon PowerTV

ಸಚಿವ ಜಮೀರ್​ಗೆ ಬಿಗ್ ಶಾಕ್ : ತೆಲಂಗಾಣದಲ್ಲಿ ತಂಗಿದ್ದ ಹೋಟೆಲ್​​ ಮೇಲೆ ಪೊಲೀಸ್ ದಾಳಿ

ಹೈದರಾಬಾದ್:ತೆಲಂಗಾಣದಲ್ಲಿ ವಿಧಾನಸಬೆ ಚುನಾವಣೆಯ ಪ್ರಚಾರಕ್ಕೆ ತರಳಿದ ಸಚಿವ ಜಮೀರ್ ಅಹಮ್ಮದ್ ಖಾನ್​ಗೆ ಪೊಲೀಸರು ದಾಳಿ ಮಾಡಿ ಶಾಕ್ ಕೊಟ್ಟಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ಸಹ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಅದರಂತೆ ಸಚಿವ ಜಮೀರ್ ಮತ ಬೇಟೆ ನಡೆಸಿದ್ದಾರೆ. ಇದರ ನಡುವೆ ಜಮೀರ್ ತಂಗಿದ್ದ ಹೋಟೆಲ್​ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಉಳಿದುಕೊಂಡಿದ್ದ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ನಿನ್ನೆ ತಡರಾತ್ರಿ ದಾಳಿಯಾಗಿದೆ.

ಸಾಮಾಜಿಕ ಜಾಲತಾಣದದಲ್ಲಿ ಸ್ಟಷ್ಟನೆಕೊಟ್ಟ ಜಮೀರ್ ಆಕ್ರೋಶ 

ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದ್ರೆ, ಅವರಿಗೆ ಏನು ಸಿಕ್ಕಿಲ್ಲ. ತೆಲಂಗಾಣದಲ್ಲಿಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ. ಇದು ನಮ್ಮನ್ನು ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರವಾಗಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

.

Exit mobile version