Site icon PowerTV

ಎಂಗೇಜ್​ಮೆಂಟ್ ರಿಂಗ್ ಕಳೆದು ಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ತುಮಕೂರು:ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಕೊಂಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ದೇವರಾಯ ಪಟ್ಟಣದದ ಕಮಲೇಶ್ (36) ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನಿಗೆ ಬೆಂಗಳೂರು ಮೂಲದ ಯುವತಿಯೊಂದಿಗೆ 3 ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿತ್ತು.

ಆತ್ಹತ್ಯೆಗೆ ಕಾರಣವೇನು..?

ಸ್ನಾನಕ್ಕೆ ತೆರಳಿದ್ದ ವೇಳೆ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿತ್ತು. ನಿಶ್ಚಿತಾರ್ಥದ ಉಂಗುರ ಕಳೆದುಹೋಗಿದ್ದಕ್ಕೆ ಕಮಲೇಶ್ ಚಿಂತಾಕ್ರಾಂತನಾಗಿದ್ದನಂತೆ. ಉಂಗುರಕ್ಕಾಗಿ ಆತ ತುಂಬಾ ಹುಡುಕಾಟ ನಡೆಸಿದ್ದನಂತೆ. ಆದರೆ ಎಷ್ಟೇ ಹುಡುಕಾಟ ನಡೆಸಿದರೂ ಉಂಗುರ ಸಿಕ್ಕಿರಲಿಲ್ಲ. ಈ ವಿಚಾರವನ್ನು ಮನೆಯರಿಗೆ ಹೇಳಲು ಹೆದರಿದ ಕಮಲೇಶ್ ನವೆಂಬರ್ 17ರಂದು ವಿಷ ಸೇವಿಸಿದ್ದಾನೆ.

ಇದನ್ನೂ ಓದಿ: ರೈಲಿಗೆ ಸಿಲುಕಿ ಸ್ಟೇಷನ್ ಮಾಸ್ಟರ್ ಆತ್ಮಹತ್ಯೆ 

ವಿಷ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿದ್ದ ಕಮಲೇಶ್‍ನನ್ನು ಚಿಕಿತ್ಸೆಗೆಂದು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಬುಧವಾರ(ನ.22) ಸಾವನ್ನಪ್ಪಿದ್ದಾನೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

 

 

 

 

Exit mobile version