Site icon PowerTV

Bigg Boss Kannada: ಸಂಗೀತಾ ಸವಾಲು ಸ್ವೀಕರಿಸಿ ತಲೆಬೋಳಿಸ್ಕೊಂಡ್ರು ಕಾರ್ತಿಕ್ ಮತ್ತು ತುಕಾಲಿ

ಬೆಂಗಳೂರು: ದೊಡ್ಮನೆಯಲ್ಲಿ ಈ ಹಿಂದೆ ಗೆಳೆಯರಾಗಿದ್ದ ಸಂಗೀತಾ ಕಾರ್ತಿಕ್ ಈಗ ದೂರಾಗಿದ್ದಾರೆ. ‘ಆಟ’ ಮಿತಿ ಮೀರಿದೆ. ಈ ಹಿಂದೆ ಗೆಳೆಯರಾಗಿದ್ದ ಸಂಗೀತಾ ಕಾರ್ತಿಕ್ ಈಗ ದೂರಾಗಿದ್ದಾರೆ. ಟಾಸ್ಕ್ ಒಂದರಲ್ಲಿ ಸಂಗೀತಾ, ಕಾರ್ತಿಕ್ ಹಾಗೂ ತುಕಾಲಿಯ ತಲೆ ಬೋಳಿಸುವಂತೆ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಆಟ ನಂತರ ಮೊದಲು ಗೆಳತನ, ಮೊದಲು ಮಾನವೀಯತೆ ಎಂದು ಯೋಚಿಸುವ ಕೆಲವು ಸ್ಪರ್ಧಿಗಳಿದ್ದಾರೆ. ಆದರೆ ಟಾಸ್ಕ್ ಗೆಲ್ಲಲು ಯಾವ ಹಂತಕ್ಕಾದರೂ ಹೋಗುವ ಮನಸ್ಥಿತಿಯ ಕೆಲವು ಸ್ಪರ್ಧಿಗಳು ಬಿಗ್​ಬಾಸ್ ಮನೆಯಲ್ಲಿದ್ದಾರೆ. ಬಿಗ್​ಬಾಸ್​ನ ಟಾಸ್ಕ್​ ಒಂದರಲ್ಲಿ ಸ್ಪರ್ಧಿಗಳು ಎದುರಾಳಿ ತಂಡದ ಇಬ್ಬರು ಸ್ಪರ್ಧಿಗಳ ತಲೆ ಬೋಳಿಸಿದ್ದಾರೆ.

ಬಿಗ್​ಬಾಸ್​ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ. ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ಮಾಡಿ ಪರಸ್ಪರ ಸವಾಲುಗಳನ್ನು ಹಾಕಿ ಆ ಸವಾಲುಗಳನ್ನು ಎದುರಾಳಿ ತಂಡ ಸ್ವೀಕರಿಸಬೇಕು ಅಥವಾ ಕೈಬಿಡಬೇಕು ಹೀಗೊಂದು ಟಾಸ್ಕ್ ನಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದಾರೆ.

ಈ ಹಿಂದೆ ಒಂದೇ ತಂಡದವರಾಗಿದ್ದ ಸಂಗೀತಾ ಹಾಗೂ ಕಾರ್ತಿಕ್ ಅವರು ಈಗ ಎದುರಾಳಿ ತಂಡದವರಾಗಿದ್ದಾರೆ. ಹಾಗಾಗಿ ಸಂಗೀತಾ, ಎದುರಾಳಿ ತಂಡದ ಸದಸ್ಯರಾದ ಕಾರ್ತಿಕ್ ಹಾಗೂ ತುಕಾಲಿ ಸಂತು ಅವರು ತಲೆ ಬೋಳಿಸಿಕೊಳ್ಳಬೇಕು ಎಂಬ ಅತಿರೇಕದ ಸವಾಲು ಹಾಕಿದರು. ಈ ಸವಾಲು ಕೇಳಿ ಕಾರ್ತಿಕ್, ತನಿಷಾ ಅವರೆಲ್ಲ ಅವಾಕ್ಕಾದರು. ಕೊನೆಗೆ ಕಾರ್ತಿಕ್ ತಂಡಕ್ಕಾಗಿ ತಲೆ ಬೋಳಿಸಿಕೊಳ್ಳಲು ಸಿದ್ಧ ಎಂದರು. ತುಕಾಲಿ ಸಂತು ಸಹ ಕಾರ್ತಿಕ್ ಜೊತೆಗೆ ತಾವೂ ತಲೆ ಬೋಳಿಸಿಕೊಳ್ಳಲು ಕುಳಿತುಕೊಂಡರು. ಮನೆಯ ಸದಸ್ಯರೇ ಕಾರ್ತಿಕ್ ಅವರ ತಲೆ ಬೋಳಿಸಿದರು.

ಈ ಸಮಯದಲ್ಲಿ ತನಿಷಾ, ಸಂಗೀತಾಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಈ ಸವಾಲು ಅತಿರೇಕದ್ದಾಯಿತು ಎಂದು ಮನದಟ್ಟು ಮಾಡುವ ಪ್ರಯತ್ನ ಮಾಡಿದರು. ಆದರೆ ಸಂಗೀತಾ ಯಾರ ಮಾತು ಕೇಳುವ ಸ್ಥಿತಿಯಲ್ಲರಲಿಲ್ಲ. ಈ ವೇಳೆ ತನಿಷಾ ಹಾಗೂ ನಮ್ರತಾ ನಡುವೆಯೂ ಜೋರು ಗಲಾಟೆಗಳಾದವು ಇದನ್ನೆಲ್ಲ ದಿಗ್ಮೂಢರಾಗಿ ನರೇಂದ್ರ (ಬ್ರಹ್ಮಾಂಡ ಗುರೂಜಿ) ನೋಡುತ್ತ ಕೂತಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ.

ಹಾಗಾದ್ರೆ ಏನಾಗ್ತಿದೆ ಬಿಗ್‌ಬಾಸ್ ಮನೆಯಲ್ಲಿ? ಗೆಲ್ಲುವ ಹಟ ಯಾವ ಅತಿರೇಕಕ್ಕೆ ಸ್ಪರ್ಧಿಗಳನ್ನು ತೆಗೆದುಕೊಂಡು ಹೋಗುತ್ತಿದೆ? ಇದಕ್ಕೆಲ್ಲ ಕಡಿವಾಣ ಬೀಳುತ್ತದೆಯೇ? ತಿಳಿದುಕೊಳ್ಳಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡವನ್ನು ವೀಕ್ಷಿಸಬಹುದು.

 

 

Exit mobile version