Site icon PowerTV

ಅನಧಿಕೃತ ಕೇಬಲ್​ಗಳ ಕಡಿವಾಣಕ್ಕೆ BBMP ಸಜ್ಜು!

ಬೆಂಗಳೂರು: ಬೆಂಗಳೂರಿನಲ್ಲಿ ಬೆಸ್ಕಾಂ ದುರಂತಕ್ಕೆ ತಾಯಿ, ಮಗು ಬಲಿಯಾಗಿದ್ದಕ್ಕೆ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ನಗರದಲ್ಲಿ ಕಠಿಣ ರೂಲ್ಸ್‌ ಜಾರಿಗೆ ಪಾಲಿಕೆ ಮುಂದಾಗಿದೆ.

ನಗರಾದ್ಯಂತ ಅನಧಿಕೃತ ಕೇಬಲ್​ಗಳ ಕಡಿವಾಣಕ್ಕೆ ಬಿಬಿಎಂಪಿ ಸಜ್ಜಾಗಿದೆ. ಇನ್ಮುಂದೆ ಯಾರೂ ಕೂಡ ಎಲ್ಲೆಂದರಲ್ಲಿ ರಸ್ತೆ ಅಗೆಯುವಂತಿಲ್ಲ. ಬೆಂಗಳೂರಿನಲ್ಲಿ ವಾರ್ಡ್ ರಸ್ತೆಗೆ ಸಂಬಂಧಿಸಿದಂತೆ ಒಟ್ಟು 13,800 ಕಿಲೋ ಮೀಟರ್​ನಷ್ಟು ರಸ್ತೆಗಳು ಇವೆ. ಇನ್ಮುಂದೆ ಒಂದು ವಾರ್ಡ್ ಗೆ ಒಬ್ಬನೇ ಗುತ್ತಿಗೆದಾರ. ಯಾವುದೇ ಕೇಬಲ್ ಅಳವಡಿಕೆ ಮಾಡಬೇಕೆಂದರೂ ಗುತ್ತಿಗೆದಾರರು ಹೊಣೆಯಾಗಿರುತ್ತಾರೆ.

ಇದನ್ನೂ ಓದಿ: ಪಿಎಸ್​ಐ ಪರೀಕ್ಷೆ ಅಕ್ರಮ ಪ್ರಕರಣ: ಡಿ.23ಕ್ಕೆ ಪಿಎಸ್ಐ ಮರು‌ ಪರೀಕ್ಷೆ!

ನಗರದಲ್ಲಿ ಇರುವ ಎಲ್ಲಾ ಒಎಫ್​ಸಿ ಸೇರಿದಂತೆ ಎಲ್ಲಾ ರೀತಿಯ ಕೇಬಲ್ ಗಳು ಡಕ್ಟ್ ನಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಎಲ್ಲಾ ರೀತಿಯ ಕೇಬಲ್‌ ಅಳವಡಿಕೆಗೆ ಡಕ್ಟ್ ನಿರ್ಮಾಣ ಮಾಡಲು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

Exit mobile version