ಬೆಂಗಳೂರು: ರಾಜ್ಯದ ಜನಸಾಮಾನ್ಯರ ರಕ್ತ ಹೀನತೆಯನ್ನ ತೊಡೆದು ಹಾಕಲು ನಮ್ಮ ಆರೋಗ್ಯ ಇಲಾಖೆ ಕಠಿಬದ್ದವಾಗಿದ್ದು ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ನಿರ್ಮಾಣದತ್ತ ನಮ್ಮ ಸರ್ಕಾರ ಸದಾ ಸಿದ್ದವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿ ₹185.74 ಕೋಟಿ ಅನುದಾನ ಒದಗಿಸಿದ್ದಾರೆ. ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕʼ ಯೋಜನೆಗೆ ಇಂದು ಚಾಲನೆ ದೊರತಿದೆ.
ಇದನ್ನೂ ಓದಿ: ಜಾತಿಗಣತಿ: ಡಿಕೆ ಶಿವಕುಮಾರ್ ಅತಿ ಬುದ್ದಿವಂತನಂತೆ ನಡೆದುಕೊಳ್ಳುತ್ತಿದ್ದಾರೆ- ಆರ್.ಅಶೋಕ್
2025 ರೊಳಗೆ ರಕ್ತಹೀನತೆ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ. ಇದೇ ವರ್ಷದ ಡಿಸೆಂಬರ್ ನಿಂದಲೇ ಶಾಲಾ ಮಕ್ಕಳಿಗೆ ತಪಾಸಣೆ ಆರಂಭಿಸಲಿದ್ದೇವೆ. ಪೌಷ್ಠಿಕ ಆರೋಗ್ಯ ಸಮಾಜ ನಿರ್ಮಾಣದತ್ತ ಹೆಚ್ಚು ಗಮನ ಹರಿಸಲಿದ್ಧೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಭೈರತಿ ಸುರೇಶ್, ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಂದೀಪ್ ಸೇರಿದಂತೆ ಅನೇಕ ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Pinco oyunu heç vaxt sıxmır. Ən çox sevilən oyunlardan zövq al pinco onlayn kazino. Pinco ilə idman mərcləri təhlükəsizdir.
Pinco ilə həyəcan dolu anlar yaşa.