Site icon PowerTV

ಬಿಜೆಪಿ ಹೇಳಿದ್ರೆ ಕುಮಾರಸ್ವಾಮಿ ದತ್ತಮಾಲೆ ಏಕೆ ಚಡ್ಡಿನೂ ಹಾಕ್ತಾರೆ : ಸಚಿವ ಚಲುವರಾಯಸ್ವಾಮಿ

ಮಂಡ್ಯ: ಬಿಜೆಪಿ ಅವರು ಹೇಳಿದ್ರೆ ಕುಮಾರಸ್ವಾಮಿ ದತ್ತಮಾಲೆ ಏಕೆ, ಚಡ್ಡಿಯೂ ಹಾಕ್ತಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಚಿವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಬರ ಅಧ್ಯಯನ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕುಮಾರಸ್ವಾಮಿ ಅವರು ಯಾವತ್ತೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಕಳೆದ ಎರಡು ತಿಂಗಳಿನಿಂದ ನಾಲಗೆ ಮೇಲೆ ಹಿಡಿತವಿಲ್ಲದಂತೆ ಮಾತನಾಡುತ್ತಿದ್ದಾರೆ. ಹೆಚ್​ಡಿಕೆ ಮಾದರಿಯಲ್ಲಿ ಮಾತನಾಡೋದು ಸರಿ ಅಂದ್ರೆ ನಾನು ಅವರಪ್ಪನ ರೀತಿಯಲ್ಲಿ ಮಾತನಾಡಬಲ್ಲೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಅಂತ ದಾಖಲೆ ಬಿಡುಗಡೆ ಮಾಡಲಿ. ಅವರ ಬಳಿ ಇರುವ ಪೆನ್ ಡ್ರೈವ್ ಬಿಡುಗಡೆ ಮಾಡಿ ಅಂದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತಾ ಹೇಳಿದ್ದಾರೆ ಅಂತಾರೆ. ಅದ್ಯಾವ ಮಂತ್ರಿ ಅಂತಾ ಹೇಳಲಿ. ಅವರ ಹತ್ತಿರ ಇರುವುದು ಪೆನ್ ಡ್ರೈವ್ ಅಲ್ಲ ಪೆನ್ಸಿಲ್ ಡ್ರೈವ್, ಇರೋದು ಅಳಿಸಿ ಹೋಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

 

Exit mobile version