Site icon PowerTV

ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯನೋ ಕಾಂಗ್ರೆಸ್ ಅಧಿಕಾರಕ್ಕೆ ಬರದಿರೋದು ಅಷ್ಟೇ ಸತ್ಯ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಕಾಂಗ್ರೆಸ್ ಅಧಿಕಾರಕ್ಕೆ ಬರದಿರೋದು ಅಷ್ಟೇ ಸತ್ಯ. ಸೂರ್ಯ ಚಂದ್ರ‌ ಇರೋದು ಎಷ್ಟು ಸತ್ಯವೋ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇನ್ನು ಏನು ಮಾತನಾಡೋದು ಅದರ ಬಗ್ಗೆ ಬಿಡಿ ಎಂದು ಕುಟುಕಿದ್ದಾರೆ.

ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಹೇಳೋರು‌ ಕೇಳೋರು ಇಲ್ಲ. ಕೇಂದ್ರದ ನಾಯಕರಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಬಂದಾಗೆಲ್ಲಾ ಸೂಚನೆ ಕೊಡ್ತಾರೆ. ಅವರು ಬರೋದು ದುಡ್ಡು ತಗೊಂಡು ಹೋಗೋಕೆ ಅಷ್ಟೇ. ಯಾರು ಮಾತನಾಡಬಾರದು ಅಂತ ಸೂಚನೆ ಕೊಡ್ತಾರೆ. ಆದರೂ, ಎಲ್ಲರೂ‌ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಫಸ್ಟ್ ಮುಖ್ಯಮಂತ್ರಿ ಕಿತ್ತು‌ ಬಿಸಾಕಬೇಕಿತ್ತು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂ ಐದು ವರ್ಷ ನಾನೇ ಸಿಎಂ ಅಂತಾರೆ. ಮೊದಲು ಮುಖ್ಯಮಂತ್ರಿ ಕಿತ್ತು‌ ಬಿಸಾಕಬೇಕಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಶಿಸ್ತು ‌ಇಲ್ಲ. ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅಂತಾರೆ. ಅವರಲ್ಲಿ ಅಸಮಾಧಾನ ಸ್ಫೋಟವಾಗುತ್ತಿದೆ ಎಂದು ಕೆ.ಎಸ್. ಈಶ್ವರಪ್ಪ ಚಾಟಿ ಬೀಸಿದ್ದಾರೆ.

Exit mobile version