Site icon PowerTV

ಜ್ಞಾನಭಾರತಿ ಹಾಸ್ಟಲ್ ಊಟದಲ್ಲಿ ಹುಳ ಪತ್ತೆ : ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು: ಹುಳಬಿದ್ದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದ ಹಾಸ್ಟಲ್​​ ನಲ್ಲಿ ನಡೆದಿದೆ.

ನಿನ್ನೆ ರಾತ್ರಿ ವಿದ್ಯಾರ್ಥಿಗಳಿಗೆ ನೀಡಲಾದ ಅಹಾರದಲ್ಲಿ ಹುಳ ಪತ್ತೆಯಾಗಿತ್ತು. ತಕ್ಷಣ ಅದ ದೃಷ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿದ್ಯಾರ್ಥಿಗಳು, ಹಾಸ್ಟಲ್ ಮುಂಬಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಆರೋಪಗಳೇನು..? 

ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಮೂಲಸೌಕರ್ಯ ಕೊರತೆಯ ಬಗ್ಗೆ ಪ್ರಶ್ನೆ ಮಾಡಿದ್ರೆ ಗೂಂಡಾಗಳ ರೀತಿ ವರ್ತನೆ ತೋರುತ್ತಾರೆ. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಬೆಡ್‌ ವ್ಯವಸ್ಥೆ ಮಾಡಿಲ್ಲ. ಸೂಕ್ತ ಶೌಚಾಲಯ ಇಲ್ಲ, ಗುಣಮಟ್ಟದ ಊಟ ಕೊಡುತ್ತಿಲ್ಲ 650 ವಿದ್ಯಾರ್ಥಿಗಳಿರುವ ಹಾಸ್ಟೆಲ್‌ ಇಲ್ಲಿಒಂದು ಕೊಠಡಿಯಲ್ಲಿ 8 ಮಂದಿಗೆ ಅವಕಾಶ ಬೇರೆ ಬೇರೆ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಆರೋಪ ಮಾಡಿದ್ಧಾರೆ.

ವಾರ್ಡನ್​ ದಬ್ಬಾಳಿಕೆ

ಹುಳಬಿದ್ದ ಆಹಾರವನ್ನೇ ತಿನ್ನುವಂತೆ ವಿದ್ಯಾರ್ಥಿನಿಲಯದ ವಾರ್ಡನ್​ ದಬ್ಬಾಳಿಕೆ ಮಾಡುತ್ತಿದ್ದಾರೆ.ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಹಾಸ್ಟಲ್ ವಾರ್ಡನನ್ನು ಕೂಡಲೇ ಅಮಾನತು ಮಾಡಬೇಕು ಎಂದು ವಿದ್ಯಾರ್ಥಿ ಮುಖಂಡರು ವಿಶ್ವವಿದ್ಯಾಲಯದ ಕುಲಪತಿ ಮತ್ತು ರಿಜಿಸ್ಟ್ರಾರ್​ ರನ್ನು ಒತ್ತಾಯಿಸಿದ್ದಾರೆ.

 

 

 

 

Exit mobile version