Site icon PowerTV

ಲೋಕಸಭೆ ಚುನಾವಣೆ ಬಳಿಕ ನಾನು ಮಂತ್ರಿ ಆಗ್ತೀನಿ : ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ ಶಾಸಕ ನರೇಂದ್ರಸ್ವಾಮಿ

ಮಂಡ್ಯ : ಪಾರ್ಲಿಮೆಂಟ್ ಚುನಾವಣೆ ನಂತರ ನಾನು ಮಂತ್ರಿ ಆಗ್ತೀನಿ ಎಂದು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೊಬ್ಬ ಭಗಂತ ಇದ್ದಾನೆ. ನಾನು ಮಂತ್ರಿ ಆಗಿಯೇ ಆಗ್ತೀನಿ. ಮಂತ್ರಿ ಆಗಿಯೇ ಆಗ್ತೀನಿ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಅಂದುಕೊಂಡಿದ್ರೆ ಮನಮೋಹನ್ ಸಿಂಗ್ ಕಾಲದಲ್ಲಿಯೇ ಆಗಬಹುದಿತ್ತು. ಒಂದೊಂದು ವಿಚಾರದಲ್ಲಿ ಒಂದು ಕಾರಣ ಇರುತ್ತೆ. ಕಳೆದ ಬಾರಿ ಮಂಡ್ಯ ಜಿಲ್ಲೆಯಿಂದ ಅಂಬರೀಶ್ ಮಂತ್ರಿ ಆದರು. ಈಗ ಚಲುವರಾಯಸ್ವಾಮಿ ಅವರು ಮಂತ್ರಿ ಆದರು. ರಾಜಕೀಯ ವಿಶ್ಲೇಷಣೆ ಮಾಡಲು ಹೋದ್ರೆ ಬೇರೆ ಬೇರೆ ಇರುತ್ತೆ ಎಂದು ಹೇಳಿದ್ದಾರೆ.

ನನಗೂ ಸಂದರ್ಭ ಒದಗಿ ಬರುತ್ತದೆ. ನನ್ನ ಕೋಟಾ 2016ರಲ್ಲಿಯೇ ಮಿಸ್ ಆಗಿತ್ತು. ಈಗಲೂ ಒಂದು ಬಾರಿ ಮಿಸ್ ಆಗಿದೆ. ನಾನು ಶಿಸ್ತನ್ನು ಉಲ್ಲಂಘನೆ ಮಾಡಲ್ಲ. ನನ್ನ ಬೇಡಿಕೆ ಇದ್ದರೆ ಹೈಕಮಾಂಡ್ ಬಳಿ ಮಾತನಾಡುತ್ತೇನೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದ್ದಾರೆ.

Exit mobile version