Site icon PowerTV

ರಾಜ್ಯ ಸರ್ಕಾರದಲ್ಲಿ ಹಣದ ಅಭಾವವಿದೆಯೇ? : ಶಾಸಕ ಯತ್ನಾಳ್ ಕಿಡಿ

ವಿಜಯಪುರ : ಬರ ನಿರ್ವಹಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ರೂಪಾಯಿಗಳನ್ನು ಲಭ್ಯವಿದೆ ಎಂದಿರುವ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಾಟಿ ಬೀಸಿದ್ದಾರೆ.

ಈ ಕುರಿತು ಟ್ವೀಟ್​(ಎಕ್ಸ್​) ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಬರ ನಿರ್ವಹಿಸಲು 800 ಕೋಟಿ ರೂಪಾಯಿಗಳನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಲಭ್ಯವಿದೆ ಎಂದು ಹೇಳುತ್ತಿರುವುದು ನಂಬಲು ಸಾಧ್ಯವಿಲ್ಲದ ವಿಷಯವಾಗಿದೆ ಎಂದು ಕುಟುಕಿದ್ದಾರೆ.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 800 ಕೋಟಿ ರೂಪಾಯಿ ಲಭ್ಯವಿದ್ದರೇ, ಇನ್ನೂ ಬರ ಪರಿಹಾರ ಕಾರ್ಯಗಳು ಯಾಕೆ ಪ್ರಾರಂಭವಾಗಿಲ್ಲ? ರಾಜ್ಯ ಸರ್ಕಾರದಲ್ಲಿ ಹಣದ ಅಭಾವವಿದೆಯೇ? ಎಷ್ಟು ರೈತರಿಗೆ ಪರಿಹಾರ ಧನ ನೀಡಲಾಗಿದೆ? ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.

ಮದರಸಾಗಳಲ್ಲಿ ಕನ್ನಡ ಭಾಷೆ ಕಲಿಸಲಿ

ರಾಜ್ಯದಲ್ಲಿ ಮದರಸಗಳಿಗೆ ಕಾನೂನು ನಿಯಮಗಳನ್ನು ರೂಪಿಸಬೇಕು, ಶಿಕ್ಷಣ ಇಲಾಖೆ ಇಂತಹ ಘಟನೆಗಳ ಮೇಲೆ ನಿಗಾ ವಹಿಸಬೇಕು. ಮದರಸಗಳು ಮುಗ್ದ ಮಕ್ಕಳ ಮನಸ್ಸುಗಳನ್ನು ಹಾಳು ಮಾಡುವ ಸ್ಥಳಗಳಾಗಬಾರದು. ಮದರಸಾಗಳಲ್ಲಿ ಮೂಲಭೂತವಾದ ಶಿಕ್ಷಣ ನೀಡದೆ, ಕನ್ನಡ ಭಾಷೆಯನ್ನೂ ಕಲಿಸಲಿ ಎಂದು ಶಾಸಕ ಯತ್ನಾಳ್ ಸಲಹೆ ನೀಡಿದ್ದಾರೆ.

Exit mobile version