Site icon PowerTV

ಕುಮಾರಣ್ಣ.. ನಿಮ್ಮ ಗೌರವ ಹಾಳಾಗ್ತಿದೆ, ಜನ ನಿಮ್ಮನ್ನು ನೋಡಿ ನಗ್ತಾರೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ಡಿ.ಕೆ. ಶಿವಕುಮಾರ್ ಮತ್ತೆ ಬ್ಲೂ ಫಿಲ್ಮಂ ಮಾಡುತ್ತಿದ್ದಾರೆಎಂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಫಸ್ಟ್ರೇಶನ್ ಆಗಿದ್ದಾರೆ. ರಾಜಕಾರಣದಲ್ಲಿ ನಾನು ಅಂಥದೇನಾದ್ರು ಕೆಲಸ ಮಾಡಿದ್ರೆ ಇವತ್ತೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿಬಿಡ್ತೀನಿ ಎಂದು ಕಿಡಿಕಾರಿದ್ದಾರೆ.

ಕುಮಾರಣ್ಣ ಹತಾಶರಾಗಿ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರಲ್ವಾ? ಆಗ ಯಾಕೆ ಮಾತನಾಡಲಿಲ್ಲ. ಅವರ ತಂದೆಯವರು ನಿಂತಿದ್ರಲ್ವಾ? ಆಗ ಯಾಕೆ ಮಾತನಾಡಲಿಲ್ಲ. ಒಬ್ಬ ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಒಂದು ಘನತೆ, ಗೌರವ ಇರಬೇಕು. ನೀವು ಏನೇನೋ ಮಾತನಾಡುತ್ತಿದ್ದೀರಿ ಅಂದ್ರೆ, ನಿಮ್ಮ ಗೌರವ ಹಾಳಾಗ್ತಿದೆ ಕುಮಾರಣ್ಣ. ಇದರಿಂದ ನಿಮಗೆ ಏನು ಒಳ್ಳೆಯದು ಆಗಲ್ಲ. ರಾಜ್ಯದ ಜನ ನಿಮ್ಮನ್ನು ನೋಡಿ ನಗ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ರಾಜಕೀಯ ನಿವೃತ್ತಿ ಆಗ್ತಿನಿ

ಕನಕಪುರದ ಜನ 1,23,000 ಮತಗಳ ಅಂತರದಿಂದ ನನ್ನನ್ನು ಆರಿಸಿ ಕಳಿಸಿದ್ದಾರೆ. ಅವರೇನು ದಡ್ಡರಾ? ಇಡೀ ರಾಜ್ಯದಲ್ಲಿ ನಾನು ಕ್ಷೇತ್ರಕ್ಕೆ ಹೋಗದೇ ಇದ್ದರೂ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ನಮ್ಮ ಕ್ಷೇತ್ರದ ಜನರನ್ನ ಕೇಳಿ, ನಿಮ್ಮ ಕಾರ್ಯಕರ್ತರನ್ನೇ ಕೇಳಿ. ಯಾರಾದರೂ ಒಬ್ಬ ನಾನು ಈತರ ಕೆಲಸ ಮಾಡ್ತಿದ್ದೀನಿ ಅಂದ್ರೆ, ನಾನು ರಾಜಕೀಯ ನಿವೃತ್ತಿ ಆಗ್ತಿನಿ. ನೀವೇನು ಮಾಡ್ತಿರಿ, ಆಗ ನಿಮ್ಮ ನಿರ್ಧಾರ ಏನು? ಇದು ಸರಿಯಲ್ಲ, ಅವರ ವರ್ತನೆ ತಪ್ಪು ಎಂದು ಹೆಚ್​ಡಿಕೆಗೆ ಡಿಕೆಶಿ ಓಪನ್ ಚಾಲೆಂಜ್ ಹಾಕಿದ್ದಾರೆ.

Exit mobile version