Site icon PowerTV

ಬಿಗ್​ಬಾಸ್ ಮನೆಗೆ ಹೋಗಬೇಕು : ನಟ ಸುದೀಪ್ ಮನೆ ಮುಂದೆ ಹೈಡ್ರಾಮಾ

ಬೆಂಗಳೂರು : ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಜನ ಸಾಮಾನ್ಯರಿಗೂ ಅವಕಾಶ ನೀಡಬೇಕು ಎಂದು ಜೆ.ಪಿ. ನಗರದಲ್ಲಿರುವ ನಟ ಕಿಚ್ಚ ಸುದೀಪ್‌ ಮನೆ ಮುಂದೆ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.

ಸೆಕ್ಯುರಿಟಿ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಸೆಲೆಬ್ರಿಟಿಗಳು, ಕಲಾವಿದರು ಮಾತ್ರವಲ್ಲ ಅನಕ್ಷರಸ್ಥರು, ರೈತರಿಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಲು ಟಿ.ನರಸಿಪುರದಿಂದ ಎತ್ತಿನ ಗಾಡಿ ಕಟ್ಟಿಕೊಂಡು ಆಗಮಿಸಿದ್ದೇನೆ ಎಂದು ಮಂಜು ಎನ್ನುವ ವ್ಯಕ್ತಿ ಹೇಳಿದ್ದಾರೆ.

ಭಾನುವಾರ ಸಂಜೆ ಸುಮಾರು 6 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಮಂಜು ಸುದೀಪ್ ಮನೆ ಮುಂದೆ ತನ್ನ ಎತ್ತಿನಗಾಡಿಯೊಂದಿಗೆ ಕಾದು ನಿಂತಿದ್ದರು. ನಂತರ ಸುದೀಪ್‌ ಮನೆಯಲ್ಲಿಲ್ಲ. ಚೆನ್ನೈ ಹೋಗಿದ್ದಾರೆ ಎಂದು ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳುಹಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

Exit mobile version