Site icon PowerTV

ಕುಮಾರಸ್ವಾಮಿಗೆ ದ್ವೇಷ, ಅಸೂಯೆ : ಸಿಎಂ ಸಿದ್ದರಾಮಯ್ಯ

ವಿಜಯಪುರ : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದ್ವೇಷ, ಅಸೂಯೆ. ಅವರು ವಿದ್ಯುತ್ ಕದಿದ್ದಾರೆ, ಕದ್ದು ದಂಡ ಬೇರೆ ಕಟ್ಟಿದ್ದಾರೆ. ಅವರಿಗೆ ನೈತಿಕತೆ ಇದೆಯಾ? ಅವರ ಬಳಿ ಮಾತನಾಡಲು ಸಾಕ್ಷಿ ಇದೆಯಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯತೀಂದ್ರ ದುಡ್ಡಿನ ವ್ಯವಹಾರ ಮಾತನಾಡಿದ್ದಾರಾ? ಅವರು ಸಿಎಸ್​ಆರ್ ಫಂಡ್ ಬಗ್ಗೆ ಮಾತನಾಡಿದ್ದಾರೆ. ಇವರ ಕಾಲದಲ್ಲಿ ದುಡ್ಡು ಮಾಡಿರೊದು ಜಗತ್ತಿಗೆ ಗೊತ್ತಿದೆ ಎಂದು ಚಾಟಿ ಬೀಸಿದ್ದಾರೆ.

ರಾಜ್ಯದಲ್ಲಿ ಬರಗಾಲ ಇದೆ, ಬರ ನಿರ್ವಹಣೆ ಮಾಡಲಾಗುತ್ತಿದೆ. ಬೆಳೆ ಪರಿಹಾರ, ನೀರು, ಮೇವಿನ ವ್ಯವಸ್ಥೆ ಮಾಡಲಾಗಿದೆ. ಯಾವುದೂ ತೊಂದರೆ ಇಲ್ಲ. ನಾನು ತಿಂಗಳ ಹಿಂದೆಯೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ, ಇದುವರೆಗೂ ಉತ್ತರ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯಾವುದಕ್ಕೂ ಉತ್ತರವೂ ಕೊಟ್ಟಿಲ್ಲ

ಎನ್​ಡಿಆರ್​ಎಫ್ ನಿಯಮ ಸಡಿಲಿಕೆ ವಿಚಾರವಾಗಿ ಮಾತನಾಡಿ, ಅದನ್ನು ಕೇಂದ್ರ ಮಾಡಬೇಕು. ಮಾಡುವಂತೆ ಮನವಿ ಮಾಡಲಾಗಿದೆ. ಕೇಂದ್ರದವರು ಬಂದು ಅಧ್ಯಯನ ಮಾಡಿಕೊಂಡು ಹೋದರು. ಪರಿಹಾರವೂ ಕೊಟ್ಟಿಲ್ಲ, ಯಾವುದಕ್ಕೂ ಉತ್ತರವೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

Exit mobile version