Site icon PowerTV

ಶೆನ್ನಿಸ್ ಪಲಾಸಿಯೋಸ್​ಗೆ 2023ರ ವಿಶ್ವ ಸುಂದರಿ ಪಟ್ಟ

ಬೆಂಗಳೂರು : 72ನೇ ವಿಶ್ವ ಸುಂದರಿ 2023 ಸ್ಪರ್ಧೆಯು ಸ್ಯಾನ್ ಸಾಲ್ವಡಾರ್‌ನಲ್ಲಿ ನಡೆದಿದ್ದು, ಈ ವರ್ಷದ ‘ಮಿಸ್ ಯೂನಿವರ್ಸ್’ ಕಿರೀಟವನ್ನು ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮದಾಗಿಸಿಕೊಂಡರು.

ಈ ವರ್ಷವೂ ಸುಮಾರು 84 ದೇಶಗಳ ಸೌಂದರ್ಯ ರಾಣಿಯರು ಪ್ರಪಂಚದಾದ್ಯಂತ ಸ್ಪರ್ಧಿಸಿದ್ದರು. ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಇತರ ಸುಂದರಿಯರೊಂದಿಗೆ ಸ್ಪರ್ಧಿಸುವ ಮೂಲಕ ವಿಶ್ವ ಸುಂದರಿ 2023ರ ಕಿರೀಟವನ್ನು ಗೆದ್ದರು.

ಇಂದು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿಕರಾಗುವಾದ ಶೆಯ್ನಿಸ್ ಪಲಾಸಿಯೊಸ್ 2023 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ವಿಜೇತ ಎಂದು ಘೋಷಿಸಲಾಯಿತು. ಇನ್ನು ಚಂಡೀಗಢದ 23 ವರ್ಷದ ಶ್ವೇತಾ ಶಾರದಾ ನಮ್ಮ ದೇಶದ ಪರವಾಗಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಭಾರತವನ್ನು ಪ್ರತಿನಿಧಿಸಿದ ಶ್ವೇತಾ ಶಾರದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದರು.

Exit mobile version