Site icon PowerTV

ಮನೆಗೆ ಹೋಗಿ ಕುಟುಂಬದ ಜೊತೆಗೆ ಕುಳಿತು ಪಂದ್ಯ ನೋಡುತ್ತೇನೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಮನೆಗೆ ಹೋಗಿ ಕುಟುಂಬದ ಜೊತೆಗೆ ಕುಳಿತು ಪಂದ್ಯ ನೋಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಪಂದ್ಯ ನೋಡಲು ಹೋಗಿದ್ದಾನೆ. ನನಗೂ ಕೆಎಸ್ಇಎ ಆಹ್ವಾನವಿತ್ತು, ನಾನು ಕಾರ್ಯಕ್ರಮ ಇರುವ ಕಾರಣಕ್ಕೆ ಬಂದಿದ್ದೇನೆ. ಪಂದ್ಯವನ್ನು ವೀಕ್ಷಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ತಮ್ಮ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣನಾ.. ಕುಮಾರಣ್ಣ ಅವರ ಆರೋಪ.. ಅವರು ಸ್ವಲ್ಪ ಸ್ತಿಮಿತ ಕಳೆದುಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಅವರ ಸ್ಥಾನಕ್ಕೆ ಗೌರವ ಇದೆ

ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಥಿಯೇಟರ್ ನಡೆಸುತ್ತಿದೆ. ಮಾಧ್ಯಮಗಳಿಗೆ ನಾನು ಮನವಿ ಮಾಡುತ್ತೇನೆ. ಮೂರು ಥಿಯೆಟರ್ ಗಳು ಇದ್ದಾವೆ. ನೀವು ಹೋಗಿ ಜನರ ಬಳಿ ಸಮೀಕ್ಷೆ ನಡೆಸಿ ಅವರಿಗೆ ಉತ್ತರ ಕೊಡಿ. ಅವರು ದೊಡ್ಡವರು, ಅವರ ಸಂಸ್ಕೃತಿ ಅದು. ಅವರು ಮಾತನಾಡುತ್ತಾರೆ ಅಂತ ನಾನು ಮಾತನಾಡಲು ಆಗಲ್ಲ. ಅವರ ಸ್ಥಾನಕ್ಕೆ ಗೌರವ ಇದೆ ಎಂದು ಹೇಳಿದ್ದಾರೆ.

Exit mobile version