Site icon PowerTV

IND vs AUS Final : ವಿಶ್ವಕಪ್​ನಲ್ಲಿ ಗೆದ್ದ ತಂಡಕ್ಕೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ಕಂಪ್ಲಿಟ್​ ಡಿಟೇಲ್ಸ್

ಅಹಮದಾಬಾದ್‌: ವಿಶ್ವಕಪ್​ನಲ್ಲಿ ಗೆದ್ದ ತಂಡಕ್ಕೆ ಬಹುಮಾನ ರೂಪದಲ್ಲಿ ಎಷ್ಟು ಮೊತ್ತ ಪಡೆಯಲಿದೆ ಎಂಬ ಕುತೂಹಲವಿರವುದು ಎಲ್ಲಾ ಸಹಜ ಹಾಗಿದ್ರೆ ಗೆದ್ದ ಟೀಮ್​ಗೆ ಹಾಗೂ ರನ್ನರ್ ಅಪ್ ಮತ್ತು ಸೆಮಿಫೈನಲ್‌ ಹಂತದವರೆಗೆ ಬರುವವರಿಗೂ ಸಿಗಬಹುದಾದ ತಂಡಕ್ಕೆ ಸಿಗುವ ಮೊತ್ತವೆಷ್ಟು..? ಎಂಬುವುದರ ಕಂಪ್ಲಿಟ್​ ಡಿಟೇಲ್ಸ್ ಇಲ್ಲಿದೆ.

ಐಸಿಸಿಯ ಘೋಷಣೆಯ ಪ್ರಕಾರ ವಿಜೇತ ತಂಡಕ್ಕೆ ಸುಮಾರು 4 ಮಿಲಿಯನ್ ಡಾಲರ್ (33,31,67,000 ರೂಪಾಯಿಗಳು) ಹಾಗೂ ಎರಡನೇ ಸ್ಥಾನದಲ್ಲಿರುವ ತಂಡಕ್ಕೆ 2 ಮಿಲಿಯನ್ ಡಾಲರ್ (16,65,83,500 ರೂಪಾಯಿ) ಸಿಗಲಿದೆ.

ಈ ಎರಡೂ ತಂಡಗಳನ್ನು ಹೊರತುಪಡಿಸಿ, 10 ತಂಡಗಳಿಗೆ  40,000 ಡಾಲರ್ ಸಿಗಲಿದ್ದು, ಟೂರ್ನಿಯ ಒಟ್ಟು ಬಹುಮಾನದ ಮೊತ್ತವೇ 10 ಮಿಲಿಯನ್ ಡಾಲರ್ ಆಗಿದೆ.

ಸೆಮಿ ಫೈನಲ್ಸ್ ನಲ್ಲಿ ಟೂರ್ನಿಯಿಂದ ಹೊರ ನಡೆದ ತಂಡಕ್ಕೆ 800,000 ಡಾಲರ್ ಬಹುಮಾನ, ಗ್ರೂಪ್ ಸ್ಟೇಜ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದ ತಂಡಗಳಿಗೆ (ಒಟ್ಟು 6 ತಂಡಗಳು) 100,000 ಡಾಲರ್ ಬಹುಮಾನ ಸಿಗಲಿದೆ.

ಏಕದಿನ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜುಗೊಂಡಿದೆ.

 

 

 

 

Exit mobile version