Site icon PowerTV

ಟೀಮ್ ಇಂಡಿಯಾಕ್ಕೆ ಶುಭ ಹಾರೈಸಿದ ಹೆಚ್​.ಡಿ. ಕುಮಾರಸ್ವಾಮಿ

ಚಿಕ್ಕಮಗಳೂರು: ಕ್ರಿಕಟ್ ಅಭಿಮಾನಿಗಳಿಗೆ ಇವತ್ತಿನ ದಿನ ವಿಶೇಷ ದಿನ. ಐತಿಹಾಸಿಕ ದಾಖಲೆ ಬರೆಯಲು ಭಾರತ ದೇಶದ ಟೀಮ್ ಇಂಡಿಯಾ ಸಜ್ಜು.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂಡಿಯಾ ತಂಡಕ್ಕೆ ಶುಭ ಹಾರೈಸಿದ್ದಾರೆ.

ನಮ್ಮ ದೇಶದ ಕ್ರಿಕೆಟ್ ಆಟಗಾರರಿಗೆ ವಿಶ್ವಕಪ್​ನಲ್ಲಿ ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಲು ಶುಭ ಹಾರೈಕೆಗಳು ಬರುತ್ತಿವೆ. ಪ್ರತಿ ಕುಟುಂಬ, ಪ್ರತಿ ನಾಗರಿಕರ ಕ್ರೀಡಾಪಟುಗಳಿಗೆ ವಿಶೇಷ ಹಾರೈಕೆಗಳನ್ನು ನಾನು ಎಂದು ನೋಡಿಲ್ಲ. ನಮ್ಮ ಟೀಂಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಮೊದಲ ಬಾರಿಗೆ 10 ಪಂದ್ಯಗಳನ್ನು ಭಾರತ ಗೆದ್ದಿದೆ. 12 ವರ್ಷಗಳಿಂದ ಭಾರತ ಕಾಯುತ್ತಿದ್ದ ಗುರಿಯನ್ನ ಇವತ್ತು ತಲುಪಲಿ ಎಂದು ಶುಭ ಹಾರೈಕೆಯನ್ನು ಮಾಡುತ್ತೇನೆ ಎಂದು ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿದರು.

Exit mobile version