Site icon PowerTV

ಲೆದರ್ ಬಾಲ್ ಮೇಲೆ ಸಿಗ್ನೇಚರ್ ಮಾಡಿ ಟೀಮ್ ಇಂಡಿಯಾಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ 

ಬೆಂಗಳೂರು: ಲೆದರ್ ಬಾಲ್ ಮೇಲೆ ಸಿಗ್ನೇಚರ್ ಮಾಡಿ ಟೀಮ್ ಇಂಡಿಯಾಕ್ಕೆ ವಿಶೇಷವಾಗಿ ಸಂಸದ ಬಿ.ವೈ ರಾಘವೇಂದ್ರ  ಶುಭಕೋರಿದ್ದಾರೆ.

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಸಂಸದ ಬಿವೈ ರಾಘವೇಂದ್ರ  ಶುಭ ಕೋರಿದ್ದಾರೆ. ಮೂರನೇ ಬಾರಿ ಭಾರತ ತಂಡ ವಿಶ್ವಕಪ್ ಗೆಲ್ಲುವ ವಿಶ್ವಾಸ ಹೊಂದಿದ್ದು, ಮೋದಿ ಅವರ ತವರಿನಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ರೋಚಕ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ ಎಂದಿದ್ದಾರೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಾಳಗ ನೋಡಲು  ಪಂದ್ಯ ವೀಕ್ಷಣೆಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯದ ಅನೇಕ ಜಿಲ್ಲೆಯ ಅಭಿಮಾನಿಗಳು ವಿವಿಧ ರೀತಿಯಲ್ಲಿ ಟೀಂ ಇಂಡಿಯಾಗೆ ಶುಭಕೋರಿದ್ದಾರೆ.

ಲೆದರ್ ಬಾಲ್ ಮೇಲೆ ಸಿಗ್ನೇಚರ್ ಮಾಡಿ ಟೀಮ್ ಇಂಡಿಯಾಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ
For More Updates: https://powertvnews.in

 

Exit mobile version