Site icon PowerTV

ಪಾಪ ಯತೀಂದ್ರ ತಂದೆ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ : ಡಿ.ಕೆ. ಶಿವಕುಮಾರ್ ಸಾಫ್ಟ್ ಕಾರ್ನರ್

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಅವರ ಫೋನ್ ಸಂಭಾಷಣೆ ಕುರಿತ ವೈರಲ್ ವಿಡಿಯೋ ಬಗ್ಗೆ ಟೀಕಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಾಪ ಯತೀಂದ್ರ ಸಿದ್ದರಾಮಯ್ಯ ಅವರು ತಂದೆ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಕೆಲಸದ ವಿಚಾರವಾಗಿ ಮಾತನಾಡಿದ್ರೆ ಅದನ್ನೇ ದೊಡ್ಡದು ಮಾಡೋದು ಸರಿಯಲ್ಲ ಎಂದು ಯತೀಂದ್ರ ಪರ ಸಾಫ್ಟ್ ಕಾರ್ನರ್ ತೋರಿದ್ದಾರೆ.

ತಂದೆ ಸಿದ್ದರಾಮಯ್ಯಗಾಗಿ ಯತೀಂದ್ರ ಕ್ಷೇತ್ರವನ್ನೇ ತ್ಯಾಗ ಮಾಡಿದವರು. ಸ್ವತಃ ಪರಿಷತ್ ಸದಸ್ಯ ಸ್ಥಾನ ನೀಡುವುದಾಗಿ ಹೇಳಿದರೂ ನಿರಾಕರಿಸಿದವರು. ಅಂತಹವರ ಮೇಲೆ ವೃಥಾ ಆರೋಪ ಮಾಡೋದು ಸರಿಯಲ್ಲ. ಅಧಿವೇಶನದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಕುಮಾರಸ್ವಾಮಿ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಆಡಳಿತ ಪಕ್ಷದವರು ಗಢಗಢ ನಡುಗ್ಬೇಕು

ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರು ಏನಾದರೂ ಮಾತನಾಡಿದರೆ ತೂಕ‌ ಇರಬೇಕು. ಆಡಳಿತ ಪಕ್ಷದವರು ಗಢಗಢ ಅಂತಾ ನಡುಗುತ್ತಿರಬೇಕು. ಏನಾದರೂ ಮಾತನಾಡಿದ್ರೆ ಹಾಗಿರಬೇಕು. ಆದರೆ, ಕುಮಾರಸ್ವಾಮಿ ಬೆಳಗ್ಗೆ ಎದ್ರೆ ಏನೇನೋ ಮಾತನಾಡುತ್ತಾರೆ ಎಂದು ಹೆಚ್​ಡಿಕೆಗೆ ತಿರುಗೇಟು ನೀಡಿದ್ದಾರೆ.

Exit mobile version