Site icon PowerTV

ಸಿಎಂ ಸ್ಥಾನಕ್ಕೆ ರಾಜೀನಾಮೆ ಯಾವಾಗ ಕೊಡ್ತೀರಾ? : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ವರ್ಗಾವಣೆ ದಂಧೆ ಸಾಬೀತುಪಡಿಸಿದರೆ ಸಿಎಂ ಸ್ಥಾನಕ್ಕೆ ನಿವೃತ್ತಿ ಕೊಂಡುತ್ತೇನೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯನವರೇ ನಿಮ್ಮ ರಾಜೀನಾಮೆ ಯಾವಾಗ..? ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪೊಲೀಸ್ ವರ್ಗಾವಣೆ ಪಟ್ಟಿಯಿಂದ ಸಿಎಂ ಸುಳ್ಳು ಹೇಳಿದ್ದೆಂದು ಗೊತ್ತಾಗಿದೆ. ಈಗ ಸಿಎಂ ಸಿದ್ದರಾಮಯ್ಯನವರೇ ಹೇಳಬೇಕು, ಯಾವಾಗ ನಿವೃತ್ತಿ ಆಗ್ತೀನೆಂದು ಹೇಳಿ ಇನ್ನುಂದೆ ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ ಎಂದು ಕಿಡಿಕಾರಿದ್ದಾರೆ.

ಜಮೀರ್ ರಾಜೀನಾಮೆ ಕೊಟ್ಟು ಹೋಗಬೇಕು

ಮುಸ್ಲಿಮರಿಗೆ ಸ್ಥಾನ ಕೊಟ್ಟಿದ್ದೇವೆ, ಬಿಜೆಪಿ ಅವರು ನಮಸ್ಕರಿಸ್ತಾರೆಂದು ಹೇಳಿದ್ದಾರೆ. ಇದಕ್ಕಿಂತ ಕೆಟ್ಟ ಸಂಸ್ಕೃತಿ ಇಲ್ಲ, ಯಾವ ಕಾಂಗ್ರೆಸ್ಸಿಗರು ಇದನ್ನು ಖಂಡಿಸಿಲ್ಲ.ಸ್ಪೀಕರ್ ಕುರ್ಚಿಯನ್ನು ಜಮೀರ್‌ ತಾಲಿಬಾನ್ ಮಾಡಲು ಹೊರಟಿದ್ದಾರೆ. ಕ್ಷಮೆ ಕೇಳಬೇಕು, ಇಲ್ಲವೇ ಜಮೀರ್ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

Exit mobile version