Site icon PowerTV

ಸ್ಪೀಕರ್ ಸ್ಥಾನ ಮಸೀದಿ ಮೌಲ್ವಿ ಹುದ್ದೆಯಲ್ಲ: ಸಿ.ಟಿ.ರವಿ

ಉಡುಪಿ: ರಾಜ್ಯ ಸರ್ಕಾರದಲ್ಲಿ ವಿಧಾನ ಸಭಾಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆ. ಅದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಸಭಾಧ್ಯಕ್ಷ ಸ್ಥಾನ ಗೌರವಿತವಾದ ಹುದ್ದೆ. ಅದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ ಎಂದು ಸಚಿವ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ್ಧಾರೆ.

ಇದನ್ನೂ ಓದಿ: ಜಾತಿ, ಧರ್ಮ ಬಿಟ್ಟು ಸ್ಪೀಕರ್ ಸ್ಥಾನ ನೋಡಬೇಕು : ಯು.ಟಿ.ಖಾದರ್

ಸಭಾಧ್ಯಕ್ಷ ಹುದ್ದೆಗೆ ಸಿಗುವ ಗೌರವ ಜಾಮಿಯಾ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ಬಿಜೆಪಿಯವರು ಮೌಲ್ವಿಗೆ ಜೀ ಹುಜೂರ್ ಎನ್ನುತ್ತಿಲ್ಲ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ. ಸಂವಿಧಾನ ಅರ್ಥ ಆಗದ ನಿಮ್ಮಂತವರು ಸಚಿವರಾದರೆ ಹೀಗೆಯೇ ಆಗುವುದು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಘನತೆಯನ್ನು ಹಾಳು ಮಾಡಬೇಡಿ’ ಎಂದು ಗುಡುಗಿದ್ಧಾರೆ.

Exit mobile version