Site icon PowerTV

ಅಶೋಕ್ ಅಣ್ಣ ವಿಪಕ್ಷ ನಾಯಕ ಆಗಿರೋದಕ್ಕೆ I’m so Happy : ಡಿ.ಕೆ. ಶಿವಕುಮಾರ್

ಬೆಂಗಳೂರು : ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ತಮ್ಮದೇ ಸಮುದಾಯದ ಪ್ರಭಾವಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರಿಗೆ ಉಪ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಶುಭ ಹಾರೈಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಶೋಕ್ ಅಣ್ಣ ವಿಪಕ್ಷ ನಾಯಕ ಆಗಿರೋದಕ್ಕೆ I’m so Happy. ಅಶೋಕ್ ಅಣ್ಣಗೆ ಇವತ್ತು ಫಸ್ಟ್ ದಿನ. I Should Wish Him ಎಂದು ಹೇಳಿದ್ದಾರೆ.

ನಾನು ಪಾಪ ಅವರಿಗೆ ಏನೋ ಹುಮ್ಮಸ್ಸಿನಿಂದ ಕುಂಬಾರನ ಮಡಕೆ ಬಿಸಾಕಿದ್ರೆ ಹೊಡೆದು ಹೋಗುತ್ತೆ ಅಲ್ವಾ? ಅಶೋಕ್‌ ಅಣ್ಣ ಅವರು ಸೀನಿಯರ್ ಅಲ್ವಾ? ರಾಜಕಾರಣದಲ್ಲಿ ಸೋಲು, ಗೆಲುವು ಎರಡನ್ನೂ ಸ್ವೀಕಾರ ಮಾಡಬೇಕು. ಎಂಥಹವರೆಲ್ಲಾ ಸೋತಿದ್ದಾರೆ, ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ದೇವೇಗೌಡರ ವಿರುದ್ಧ ಸೋತಿಲ್ವಾ?

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೋತಿರಲಿಲ್ವಾ? ನಾನು ದೇವೇಗೌಡರ ವಿರುದ್ಧ ಸೋತಿಲ್ವಾ? ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲರೂ ಗೆಲ್ಲಲು ಆಗುತ್ತಾ? ನಾವೆಲ್ಲಾ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಸೋಲನ್ನ ಸ್ವೀಕಾರ ಮಾಡಕೊಳ್ಳಬೇಕು ಎಂದು ಆರ್​. ಅಶೋಕ್ ಬಗ್ಗೆ ಡಿ.ಕೆ. ಶಿವಕುಮಾರ್ ಸಾಫ್ಟ್ ಕಾರ್ನರ್ ತೋರಿದ್ದಾರೆ.

ಕುಮಾರಸ್ವಾಮಿ ಬಿಜೆಪಿ ವಕ್ತಾರರಾ?

ಇದೇ ವೇಳೆ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿದ ಡಿಕೆಶಿ, ಮೊನ್ನೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ 40 ಜನ ಬಿಜೆಪಿ ಸಂರ್ಪಕದಲಿದ್ದಾರೆ ಅಂತಾ ಹೇಳಿದ್ದಾರೆ. ಹಾಗಾದರೆ ಇವರು ಬಿಜೆಪಿ ವಕ್ತಾರರಾ? ಎಂದು ಪ್ರಶ್ನೆ ಮಾಡಿದ್ದಾರೆ.

Exit mobile version