Site icon PowerTV

ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನಕ್ಕೆ ಎಷ್ಟು ಫಿಕ್ಸ್  ಆಗಿದೆ? : ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ. ತಮ್ಮ ಬಳಿಗೆ ಒಬ್ಬ ಏಜೆಂಟ್ ಬಂದಿದ್ದರು ಎಂದು ಹಾಗಿದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ, ವಿಪಕ್ಷ ಸ್ಥಾನಕ್ಕೆ ಎಷ್ಟು ಫಿಕ್ಸ್ ಆಗಿದೆ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದಕೆಲ್ಲಾ ಮೇಲುಗೈ ಬಿ.ಎಸ್ ಯಡಿಯೂರಪ್ಪ ಎಂದು ಮಾಧ್ಯಮದಲ್ಲಿ ಸುದ್ದಿ ಬಿತ್ತಾರವಾಗುತ್ತಿದೆ. ಹಾಗಾದರೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರು ಏನು ಮಾಡಬೇಕು? ಎಲ್ಲದಕ್ಕೂ ಉತ್ತರ ಕೇಶವಕೃಪ, ಬಿಜೆಪಿ ಕಚೇರಿಯಲ್ಲಿ ಇರಬಹುದು ಎಂದರು.

ಇದನ್ನೂ ಓದಿ: ಸ್ಪೀಕರ್ ಸ್ಥಾನ ಮಸೀದಿ ಮೌಲ್ವಿ ಹುದ್ದೆಯಲ್ಲ: ಸಿ.ಟಿ.ರವಿ

ಬಿಜೆಪಿ ವರ್ಸಸ್ ಬಿಜೆಪಿ ಇನ್ನೂ ಮುಗಿದಿಲ್ಲ. ಇದು ಪಾರ್ಟ್ ಟೂ ಆಗಿದೆ. ಪಾರ್ಟ್ ಒನ್ ಬಿ.ಎಲ್. ಸಂತೋಷ ಅವರದ್ದು. ಪಾರ್ಟ್ ಟೂ ಇವರದ್ದಾಗಿದೆ. ಮಂಡ್ಯ ಉಸ್ತುವಾರಿ ಆಗಿದ್ದಾಗಾ ಗೋ ಬ್ಯಾಕ್ ಅಶೋಕ್ ಎಂದು ಪೋಸ್ಟರ್ ಅಂಟಿಸಿದ್ದರು. ಈಗ ಬಿಜೆಪಿ ಕಚೇರಿಯಲ್ಲಿ ಗೋ ಬ್ಯಾಕ್ ಎಂದು ಪೋಸ್ಟರ್ ಅಂಟಿಸಿದರೆ ಅಚ್ಚರಿ ಇಲ್ಲ ಎಂದರು.

“ನಾನು ಮಾರಾಟಕ್ಕಿಲ್ಲ” ಎಂದು ನಿನ್ನೆ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ನಾಯಕರು ಅವರ ಪಕ್ಷದ ಶಾಸಕರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಿ ಕಾಂಗ್ರೆಸ್‌ಗೆ ಉತ್ತರ ಕೊಡುವುದು ಬೇಡ ಎಂದರು.

 

 

Exit mobile version