Site icon PowerTV

HDKಗೆ ಹೊಟ್ಟೆಕಿಚ್ಚು, ದ್ವೇಷದ ರಾಜಕಾರಣ ಮಾಡ್ತಿದ್ದಾರೆ : ಸಿ ಎಂ ಸಿದ್ದರಾಮಯ್ಯ

ಮೈಸೂರು: HDKಗೆ ಹೊಟ್ಟೆಕಿಚ್ಚು, ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಕುರಿತ ಆರೋಪಗಳಿಗೆ ವಿಧಾನಸಭೆ ಸದನದಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಡಿಯೊದಲ್ಲಿ ಚರ್ಚೆ ಆಗಿರುವ ಹೆಸರು ಮೈಸೂರು ಬಿಇಒ ವಿವೇಕಾನಂದರ ಹೆಸರೇ ಹೊರತು ಪೊಲೀಸ್ ಅಧಿಕಾರಿಯದ್ದಲ್ಲ. ವಿ.ವಿ.ಪುರಂ ಇನ್‌ ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆ ಆಗಿರುವುದು ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ. ಈ ಬಗ್ಗೆ ಅಲ್ಲಿನ ಶಾಸಕರನ್ನೇ ಕೇಳಿ’ ತಿರ್ಮಾನಿಸಿ ಎಂದರು.

ಇದನ್ನೂ ಓದಿ: ಟ್ರಾನ್ಸ್ ಫರ್​ಗೂ ನನಗೂ ಸಂಬಂಧವಿಲ್ಲ : ಕುಮಾರಸ್ವಾಮಿ ಮಾಡುತ್ತಿರುವುದು ನೀಚ ರಾಜಕಾರಣ : ಯತೀಂದ್ರ ಸಿದ್ದರಾಮಯ್ಯ

ಕುಮಾರಸ್ವಾಮಿ ಈ ಹಿಂದೆ ಪೆನ್ ಡ್ರೈವ್ ತೋರಿಸುತ್ತೇನೆ ಎಂದಿದ್ದರು. ತೋರಿಸುವಂತೆ ಸಾಕಷ್ಟು ಮಂದಿ ಮನವಿ ಮಾಡಿದ್ದಾರೆ. ಮೊದಲು ತೋರಿಸಲು ಹೇಳಿ. ವಿದ್ಯುತ್‌ ಕದ್ದವರ ಬಗ್ಗೆ ಏನು ಕೇಳುತ್ತೀರಿ. ಅಪರಾಧ ಎಂದರೆ ಅಪರಾಧವೇ. ಅವರಿಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

Exit mobile version