Site icon PowerTV

ಬಿಜೆಪಿ ಗ್ಯಾರಂಟಿ ಎಂದರೆ ‘ಬಡವರ ಲೂಟಿ’ : ರಾಹುಲ್ ಗಾಂಧಿ

ಬೆಂಗಳೂರು : ಬಿಜೆಪಿ ಸಂಬಂಧಿ ಸಮಿತಿ, ಬಿಆರ್‌ಎಸ್ ಗ್ಯಾರಂಟಿ ಎಂದರೆ ‘ಬಡವರ ಲೂಟಿ’ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರವ ಅವರು, ತೆಲಂಗಾಣದಿಂದ ಕೆಸಿಆರ್ ಕದ್ದಿದ್ದ ಹಣವನ್ನೆಲ್ಲ ನಾವು (ಕಾಂಗ್ರೆಸ್​) ಬಡವರ ಜೇಬಿಗೆ ಹಾಕಲಿದ್ದೇವೆ ಎಂದು ಹೇಳಿದ್ದಾರೆ.

ತೆಲಂಗಾಣಕ್ಕೆ ಕಾಂಗ್ರೆಸ್ 6 ಭರವಸೆ (ಗ್ಯಾರಂಟಿ) ಕೊಟ್ಟಿದೆ. ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., ರೈತರಿಗೆ ವರ್ಷಕ್ಕೆ 15,000 ರ., ಮನೆ ನಿರ್ಮಾಣಕ್ಕೆ 5 ಲಕ್ಷ ರೂ., 200 ಯೂನಿಟ್ ಉಚಿತ ವಿದ್ಯುತ್, ಕಾಲೇಜು ವಿದ್ಯಾರ್ಥಿಗಳಿಗೆ 5 ಲಕ್ಷ ರೂ. 4,000 ಮಾಸಿಕ ಪಿಂಚಣಿ. ಇದಲ್ಲದೇ ರೈತರ 2 ಲಕ್ಷ ರೂ. ಸಾಲ ಮನ್ನಾ ಆಗಲಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಶೇ.23ರಿಂದ ಶೇ.42ಕ್ಕೆ ಏರಲಿದೆ ಎಂದು ಭರವಸೆ ನೀಡಿದ್ದಾರೆ.

ಲಕ್ಷಾಂತರ ರೂ. ಕಮಿಷನ್‌ ಪಡೆಯುತ್ತಾರೆ

ತೆಲಂಗಾಣ ಸರ್ಕಾರದಲ್ಲಿ ಭೂಮಿ, ಮದ್ಯ, ಮರಳಿನಂಥ ಇಲಾಖೆಗಳು ಒಂದೇ ಕುಟುಂಬದವರ ಪಾಲಾಗಿವೆ. ಬಿಆರ್‌ಎಸ್‌ ಶಾಸಕರು ಲಕ್ಷಾಂತರ ರೂಪಾಯಿ ಕಮಿಷನ್‌ ಪಡೆಯುತ್ತಾರೆ. ಸರ್ಕಾರಿ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ರೈತರ ಸಾಲ ಮನ್ನಾ ಆಗಿಲ್ಲ, ರಸಗೊಬ್ಬರ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version