Site icon PowerTV

ಅಧಿಕಾರಿಗಳ ನಿರ್ಲಕ್ಷ್ಯ: ಬೆಂಗಳೂರಿನ SP ರಸ್ತೆ ಸಂಪೂರ್ಣ ಗುಂಡಿಮಯ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಗುಂಡೀಮಯ ಸಿಟಿಯಾಗಿದೆ ಮಾರ್ಪಾಟಾಗಿದೆ. ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಕಳೆದ 6 ತಿಂಗಳಿಂದ ನಗರದ SP ರೋಡ್ ಹದಗೆಟ್ಟು ನಿಂತಿದೆ.

ಪ್ರಸಿದ್ದ ಧರ್ಮರಾಯ ದೇವಾಸ್ಥಾನ ಇರುವ ಹಾಗೂ ವಿಶ್ವಪ್ರಸಿದ್ದ ಬೆಂಗಳೂರು ಕರಗ ನಡೆಯುವ ರಸ್ತೆಯ ದುಸ್ಥಿತಿ ಬಗ್ಗೆ ಹೇಳೋರಿಲ್ಲಾ ಕೇಳೋರಿಲ್ಲಾದಂತಾಗಿದ್ದು, ಕೆ.ಆರ್ ಮಾರ್ಕೆಟ್ ಸೇರಿದಂತೆ ಹಲವು ಪ್ರಮುಖ ಜಾಗಗಳಿಗೆ ಸಂಪರ್ಕ ಕಲ್ಲಿಸುವ SP ರೋಡ್ ಹಾಳಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಮೀರ್​ ಹೇಳಿಕೆಗೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ!

ಇನ್ನು, ಹಾಳಾದ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು KSRTC ಹಾಗೂ BMTC ಸಂಚರಿಸುತ್ತಿದ್ದು, ಪ್ರಯಾಣಿಕರು ರೋಸಿ ಹೋಗಿದ್ದು, ಆದಷ್ಟು ಬೇಗ ರಸ್ತೆ ಸರಿಪಡಿಸುವಂತೆ ಪಾಲಿಕೆಗೆ ಸಾರ್ವಜನಿಕರ ಮನವಿ ಮಾಡಿದ್ದಾರೆ.

Exit mobile version