Site icon PowerTV

ರಾಜ್ಯದಲ್ಲಿ ಶೇ.35 ರಷ್ಟು ಮಳೆ ಕೊರತೆ!

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಶೇ. 35ರಷ್ಟು ಮಳೆ ಕೊರತೆ ಆಗಿದ್ದು, ಮಳೆ ಕೊರತೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ, ಕೊಡಗು, ಹಾಸನ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ, ಮುಂದುವರಿದಿದೆ. ದಕ್ಷಿಣ ಕನ್ನಡದಲ್ಲಿ ಶೇ. 9, ಮೈಸೂರಿನಲ್ಲಿ ಶೇ. 49, ಕೊಡಗು ಶೇ. 18, ಹಾಸನ ಶೇ. 13ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.

ಇದನ್ನೂ ಓದಿ: ಇಂದಿನಿಂದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗದಲ್ಲಿ ಟೋಲ್ ಸಂಗ್ರಹ!

ಬೆಂಗಳೂರಿನಲ್ಲಿ ಶೇ. 17, ಉಡುಪಿಯಲ್ಲಿ ಶೇ. 25, ಉತ್ತರ ಕನ್ನಡ ಶೇ. 19, ಬೆಂ. ಗ್ರಾಮಾಂತರ ಶೇ. 16, ಬಳ್ಳಾರಿಯಲ್ಲಿ ಶೇ. 86, ರಾಯಚೂರು, ಯಾದಗಿರಿ ಶೇ. 82, ಬಾಗಲಕೋಟೆ ಶೇ. 85, ವಿಜಯಪುರ ಶೇ. 77, ಬೀದರ್ ಶೇ. 79, ಕಲಬುರಗಿ, ಹಾವೇರಿ ತಲಾ ಶೇ. 64, ಧಾರವಾಡ ಶೇ. 60, ಬೆಳಗಾವಿ ಶೇ. 79, ಕೋಲಾರ ಜಿಲ್ಲೆಯಲ್ಲಿ ಶೇ. 57ರಷ್ಟು ಮಳೆ ಕೊರತೆ ಇರುವುದನ್ನು ಹವಾಮಾನ ಇಲಾಖೆ ದೃಢಪಡಿಸಿದೆ.

Exit mobile version