Site icon PowerTV

ವಿಜಯೇಂದ್ರಗಿಂತ ಡಿಕೆಶಿ ಹತ್ತು ಪಟ್ಟು ಸ್ಟ್ರಾಂಗ್ : ಮೊಹಮ್ಮದ್ ನಲಪಾಡ್

ಹಾವೇರಿ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗಿಂತ ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಹತ್ತು ಪಟ್ಟು ಸ್ಟ್ರಾಂಗ್ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್​ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ವೈ. ವಿಜಯೇಂದ್ರ ಅವರು ರಾಜ್ಯ ಯುವ ಬಿಜೆಪಿ ಅಧ್ಯಕ್ಷ ಆಗಿದ್ದರೆ ನನಗೆ ಇನ್ನೂ ಸಂತೋಷ ಆಗುತ್ತಿತ್ತು. ಅವರ ಟೈಮ್ ಚೆನ್ನಾಗಿದೆ, ಅವರು ರಾಜ್ಯಾಧ್ಯಕ್ಷರಾಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶುಭಕೋರಿದ್ದಾರೆ.

ಅವರ (ಬಿಜೆಪಿ) ಪಕ್ಷದ ವಿಚಾರ ನಮಗೆ ಬೇಕಾಗಿಲ್ಲ. ನಮ್ಮ ಪಕ್ಷದಲ್ಲಿ ಅವರಿಗಿಂತ ಹತ್ತು ಪಟ್ಟು ಸ್ಟ್ರಾಂಗ್ ಆಗಿರುವ ಅಧ್ಯಕ್ಷರಿದ್ದಾರೆ. ಒಮ್ಮೆ ಅವರನ್ನ (ಡಿ.ಕೆ. ಶಿವಕುಮಾರ್) ಮುಟ್ಟಿದ್ದಕ್ಕೆ 66ಕ್ಕೆ ಬಂದ್ರು, ಇನ್ನೂ ಹತ್ತಿರಕ್ಕೆ ಬಂದ್ರೆ 33ಕ್ಕೆ ಹೋಗ್ತಾರೆ ಎಂದು ನಲಪಾಡ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಶ್ಯಾಡೋ ಸಿಎಂ.. ತರ ಯಾವುದು ಇಲ್ಲ

ಸಿಎಂ ಪುತ್ರ ಯತೀಂದ್ರ ಫೋನ್ ಸಂಭಾಷಣೆ ಹಾಗೂ ಶ್ಯಾಡೋ ಸಿಎಂ ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಕೊಡುತ್ತಿದಾರೆ. ಶ್ಯಾಡೋ ಸಿಎಂ ಆ ತರ ಯಾವುದು ಇಲ್ಲ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಸಿಎಂ ಆಯ್ಕೆ ಮಾಡ್ತಾರೆ. ಪಕ್ಷದ ನಿರ್ಧಾರವನ್ನ ನಾವು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

Exit mobile version