Site icon PowerTV

ಅಪ್ಪ ಸಚಿವರಾಗಿದ್ದಾಗ ಅವರ ಕ್ಷೇತ್ರ ನಾನೇ ನೋಡಿಕೊಳ್ತಾ ಇದ್ದೆ : ಯತೀಂದ್ರ ಪರ ರೇವಣ್ಣ ಬ್ಯಾಟಿಂಗ್

ಮೈಸೂರು : ಸಿಎಂ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಯತೀಂದ್ರರ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತ ಹೇಳ್ತಾರೆ, ಅದು ತಪ್ಪ? ಅವರೂ ಶಾಸಕರಾಗಿದ್ದರು, ಕೆಲಸ ಆಗಬೇಕು ಅಂತ ಹೇಳಿರಬಹುದು ಎಂದು ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ.

ಸಿಎಂ ಕ್ಷೇತ್ರದ ಜವಾಬ್ದಾರಿ ತಗೊಂಡಿದ್ದಾರೆ. ಹಾಗಾಗಿ ಏನೋ ಮಾತನಾಡಿರಬಹುದು. ಅದಕ್ಕೆಲ್ಲಾ ನಾನು ಸಣ್ಣದಾಗಿ ಮಾತಾಡೋಕೆ ‌ಹೋಗಲ್ಲ. ನಾನೂ ಕೂಡ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಕ್ಷೇತ್ರ ನೋಡಿಕೊಳ್ತಾ ಇದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತನಾಡಿರ್ತಾರೆ. ಈ ಬಗ್ಗೆ ನಾನು ಯಾವುದೇ ಟೀಕೆ ಮಾಡುವುದಿಲ್ಲ ಎಂದು ರೇವಣ್ಣ ಹೇಳಿದ್ದಾರೆ.

ಬಿಡಿಗಾಸು ಖರ್ಚು ಮಾಡಲು ಆಗಲ್ಲ

ಹಾಸನ ಜಿಲ್ಲೆಗೆ ಬರ ನಿರ್ವಹಣೆಗೆ 12 ಕೋಟಿ ಕೊಟ್ಟಿರೊದಾಗಿ ಸಿಎಂ ಹೇಳಿದ್ರು. ಅದರಲ್ಲಿ ನಾಲ್ಕು ಕೋಟಿ ಅನುದಾನ ಬಳಕೆ ಬಗ್ಗೆ ಡಿಸಿ ಅವರಿಗೆ ನಿರ್ದೇಶನ ನೀಡಿದಾರಂತೆ. ಪ್ರತಿ ತಾಲ್ಲೂಕಿಗೆ ತಲಾ 50 ಕೋಟಿ ಅನುದಾನ ನೀಡಲಾಗಿದೆ. ಆದರೆ, ಸರ್ಕಾರ ಹಾಕಿರೋ ಗೈಡ್ ಲೈನ್ ಪ್ರಕಾರ ಈ ನಾಲ್ಕು ಕೋಟಿಯಲ್ಲಿ ಒಂದು ಬಿಡಿಗಾಸು ಖರ್ಚು ಮಾಡಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version