Site icon PowerTV

ಪ್ರಿಯಾಂಕ್ ಖರ್ಗೆ ತನ್ನಷ್ಟಕ್ಕೆ ತಾನೇ ಎರಡನೇ ಅಂಬೇಡ್ಕರ್ ಅಂದುಕೊಂಡಿದ್ದಾರೆ : ಬಿ. ಶ್ರೀರಾಮುಲು

ಕಲಬುರಗಿ : ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವುದಕ್ಕೆ ಕುಂಟುಂಬ ರಾಜಕಾರಣ ಎಂದು ಟೀಕಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ತನ್ನಷ್ಟಕ್ಕೆ ತಾನೇ ಎರಡನೇ ಅಂಬೇಡ್ಕರ್ ಅಂದುಕೊಂಡಿದ್ದಾರೆ ಎಂದು ಕುಟುಕಿದ್ದಾರೆ.

ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಒಂದು ಮಾತನಾಡ್ತಾರೆ, ಬೆಂಗಳೂರಿನಲ್ಲಿ ಒಂದು ಮಾತನಾಡ್ತಾರೆ. ಪ್ರಿಯಾಂಕ್ ಖರ್ಗೆ ಅವರದ್ದು ಕುಟುಂಬ ರಾಜಕಾರಣಾ ಅಲ್ವಾ? ಪ್ರಿಯಾಂಕ್ ಖರ್ಗೆ ಬೆಳೆದದ್ದೇ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಆಶ್ರಯದಲ್ಲಿ ಎಂದು ಚಾಟಿ ಬೀಸಿದ್ದಾರೆ.

ಚುನಾವಣೆ ಸ್ಪರ್ಧೆ ಬಗ್ಗೆ ಸುಳಿವು?

ಬಿ.ವೈ. ವಿಜಯೇಂದ್ರ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ವಿಜಯೇಂದ್ರ ನೇತೃತ್ವದಲ್ಲಿ ಕಳೆದ ಬಾರಿಗಿಂತ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನಿನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಮುಂದೆ ವಿಚಾರ ಮಾಡುತ್ತೇನೆ ಎನ್ನುವ ಮೂಲಕ ಬಿ. ಶ್ರೀರಾಮುಲು ಕಾದುನೋಡುವ ತಂತ್ರದ ಮೊರೆ ಹೋಗಿದ್ದಾರೆ.

Exit mobile version